ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಂತ್ರಾಲಯ: 18ರಂದು ಕಳಾಕರ್ಷಣ

Rashmi Kasaragodu
Updated On : 13 May 2014, 12:58 pm

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರಸ್ವಾಮಿಗಳ ಮಠದ ಪೂರ್ವ ಪೀಠಾಧಿಪತಿ ಕೆಲವು ತಿಂಗಳ ಹಿಂದೆ ಹರಿಪಾದೈಕ್ಯರಾದ ಸುಯತೀಂದ್ರ ತೀರ್ಥರ ಕಳಾಕರ್ಷಣ ಧಾರ್ಮಿಕ ವಿಧಿವಿಧಾನಗಳು ಮೇ 18ರಂದು ನಡೆಯಲಿವೆ ಎಂದು ಶ್ರೀಮಠ ತಿಳಿಸಿದೆ. ಮಂತ್ರಾಲಯದ ಪ್ರಸ್ತುತ ಪೀಠಾಧಿಪತಿ ಸುಬುಧೇಂದ್ರತೀರ್ಥರ ಆದೇಶದಂತೆ ಮೇ 18ರಂದು ಸುಯತೀಂದ್ರ ತೀರ್ಥರ ಕಳಾಕರ್ಷಣ (ಬೃಂದಾವನ ನಿರ್ಮಾಣ ಸಂಬಂಧಿ ವಿಧಿವಿಧಾನ) ಮಹೋತ್ಸವವನ್ನು ನಡೆಸಲು ನಿರ್ಧ್ಧರಿಸಲಾಗಿದೆ. ಅಂದು ಬೆಳಗ್ಗೆ 6ರಿಂದ 11 ಗಂಟೆಯವರೆಗೆ ಭಕ್ತರಿಗೆ ಪೂರ್ವ ಪೀಠಾಧಿಪತಿಗಳ ಶರೀರದ ದರ್ಶನ ಮಾಡಲು ಅವಕಾಶ ನೀಡಲಾಗುತ್ತದೆ. ಅದಕ್ಕೂ ಮೊದಲು ಅವರ ಶರೀರಕ್ಕೆ ಪುಷ್ಪಮಾಲೆ ಸಮರ್ಪಣೆ ಸೇರಿದಂತೆ ಕೆಲ ಧಾರ್ಮಿಕ ವಿಧಿ-ವಿಧಾನಗಳನ್ನು ನೆರವೇರಿಸಿ ಸರ್ವರಿಗೆ ದರ್ಶನಕ್ಕೆ ಅನುವು ಮಾಡಿಕೊಡಲಾಗುತ್ತದೆ ಎಂದು ಶ್ರೀಮಠ ತಿಳಿಸಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement