ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶಿಲಾಮೂರ್ತಿ ಪ್ರತಿಷ್ಠಾಪನೆ

Mainashree
Updated On : 13 May 2014, 10:38 am

ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಮೇ 12
ನಗರದ ಕಂದಗಡ್ಡೆ ಮಾರೆಮ್ಮದೇವಿಯ ನೂತನ ಶಿಲಾಮೂರ್ತಿ ಪ್ರತಿಷ್ಠಾಪನೆ ವಿಧಿವಿಧಾನಗಳು ಸೋಮವಾರ ನಡೆದವು.
ನಗರದ ಕಂದಗಡ್ಡೆ ಮಾರೆಮ್ಮದೇವಿ ದೇವಸ್ಥಾನದಲ್ಲಿ ಶಿಲಾಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಕಳೆದೆರಡು ದಿನಗಳಿಂದ ವಿವಿಧ ಹೋಮಗಳು ನಡೆದಿದ್ದು, ಸೋಮವಾರ ಬೆಳಗ್ಗೆ ದೇವಸ್ಥಾನದಲ್ಲಿ ನವಚಂಡಿ ಹೋಮ ಪೂರೈಸಿದ ನಂತರ ಮೂರ್ತಿಯ ಪ್ರಾಣ ಪ್ರತಿಷ್ಠಾಪನೆ ಹಾಗೂ ಪೂರ್ಣಾಹುತಿ ವಿಶೇಷ ಪೂಜೆ ನೆರೆವೇರಿಸಲಾಯಿತು.
ಪ್ರಾಣ ಪ್ರತಿಷ್ಠಾಪನೆ: ಕಳೆದ ಮೂರು ದಿನಗಳಿಂದ ಶ್ರೀಮಾತಾ ಕಂದಗಡ್ಡೆ ಮಾರೆಮ್ಮದೇವಿಯ ನೂತನ ಶಿಲಾಮೂರ್ತಿಗಳ ಪ್ರತಿಷ್ಠಾಪನೆ ಅಂಗವಾಗಿ ವಿವಿಧ ವಿಶೇಷ ಪೂಜೆಗಳನ್ನು ನೆರವೇರಿಸಿದ ನಂತರ ಬೆಳಗ್ಗೆ ಕಿಲ್ಲೆ ಬೃಹನ್ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಶ್ರೀವೇದಮೂರ್ತಿ ಶಿವಯ್ಯಸ್ವಾಮಿ ಹಾಗೂ ಗುಜರಾತ್ ಮೂಲದ ಪಂಡಿತ ವೃಂದದ ಪೌರೋಹಿತ್ಯದಲ್ಲಿ ಶಿವಪಾರ್ವತಿ ಕಲ್ಯಾಣ ನಂತರ ಶಿಲಾಮೂರ್ತಿಗೆ ಪ್ರಾಣಪ್ರತಿಷ್ಠಾಪನೆ ಮಾಡಲಾಯಿತು.
ನವಚಂಡಿ ಹೋಮ, ಪೂರ್ಣಾಹುತಿ ಮಾಡಿ ಮಹಾಮಂಗಳಾರತಿ ದರ್ಶನ ನೆರವೇರಿಸಲಾಯಿತು. ನೂರಾರು ಭಕ್ತರು ಶಿಲಾಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ದೇವಸ್ಥಾನದ ಅರ್ಚಕರಾದ ಬಿ.ಮಾರೆಪ್ಪ ಪೂಜಾರಿ, ಬಾಲಚಂದ್ರಪ್ಪ ಪೂಜಾರಿ, ಬರೋಡಾ ಈರಮ್ಮ, ಬಿ.ರಮೇಶ ಪೂಜಾರಿ, ಬಿ.ನಾಗೇಶ ಪೂಜಾರಿ, ಅಂಜಿನೇಯ್ಯ, ಕೆ. ಖಂಡೆಪ್ಪ,ನಾರಾಯಣ, ನರಸಿಂಹಲು ಸೇರಿ ಶ್ರೀಮಾತಾ ಮಾರೆಮ್ಮದೇವಿ ಸದ್ಭಕ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement