ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

18 ಶಾಲೆಗಳಿಗೆ ಶೇ.100 ಫಲಿತಾಂಶ

Lingaraj Badiger
Updated On : 14 May 2014, 11:13 am

ಲಿಂಗಸ್ಗೂರು: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ 18 ಪ್ರೌಢಶಾಲೆಗಳು ಶೇ.100ರಷ್ಟು ಫಲಿತಾಂಶ ಪಡೆದಿರುತ್ತವೆ. ತಾಲೂಕಿನ ಮಾವಿನಬಾವಿ ಸರ್ಕಾರಿ ಪ್ರೌಢಶಾಲೆಯ 58 ವಿದ್ಯಾರ್ಥಿಗಳು, ಬಯ್ಯಾಪುರ ಸರ್ಕಾರಿ ಪ್ರೌಢಶಾಲೆ 85, ಲಿಂಗಸ್ಗೂರು ಸರಕಾರಿ ಉರ್ದು ಪ್ರೌಢಶಾಲೆಯ 11, ಮಾರಲದಿನ್ನಿ ಸರ್ಕಾರಿ ಪ್ರೌಢಶಾಲೆಯ 27, ಕಾಚಾಪೂರ ಸರ್ಕಾರಿ ಪ್ರೌಢಶಾಲೆಯ 12, ಮಸ್ಕಿ ಮೊರಾರ್ಜಿ ದೇಸಾಯಿ ವಸತಿ(ಬಿಸಿಎಂ) ಪ್ರೌಢಶಾಲೆಯ 34, ಮಸ್ಕಿ ಮೊರಾರ್ಜಿ ದೇಸಾಯಿ ವಸತಿ ಶಾಲೆ(ಎಸ್‌ಟಿ)ಯ 33, ದೇವರಭೂಪುರ ಮೊರಾರ್ಜಿ ಶಾಲೆಯ 22, ಅಡವಿಬಾವಿ ಕಿತ್ತೂರು ರಾಣಿ ಚೆನ್ನಮ್ಮ ಶಾಲೆ- 24, ಮಸ್ಕಿ ಜೋಗಿನ್ ರಾಮಣ್ಣ ಪ್ರೌಢಶಾಲೆ- 68, ಸಂತೆಕೆಲ್ಲೂರು ಘನಮಠೇಶ್ವರ ಪ್ರೌಢಶಾಲೆ- 19, ಮುದಗಲ್ ಮದರ್ ಥೆರೇಸಾ ಪ್ರೌಢಶಾಲೆ- 22, ಮುದಗಲ್ ವಿಜಯ ಮಹಾಂತೇಶ ಪ್ರೌಢಶಾಲೆ- 18, ಜ್ಞಾನ ಸಂಜೀವಿನಿ(ಆಂಗ್ಲ) ಪ್ರೌಢಶಾಲೆ- 33, ಹಟ್ಟಿ ಕ್ಯಾಂಪ್ ಬಸವೇಶ್ವರ ಪ್ರೌಢಶಾಲೆ- 16, ಲಿಂಗಸ್ಗೂರು ಜ್ಞಾನಗಂಗಾ(ಕನ್ನಡ) ಪ್ರೌಢಶಾಲೆ- 17, ಲಿಂಗಸ್ಗೂರು ಜ್ಞಾನಗಂಗಾ(ಆಂಗ್ಲ) ಪ್ರೌಢಶಾಲೆ- 21 ವಿದ್ಯಾರ್ಥಿಗಳು ಶೇ.100ರಷ್ಟು ಫಲಿತಾಂಶ ಪಡೆದಿರುತ್ತಾರೆ.
ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು: ತಾಲೂಕಿನಲ್ಲಿ ಮೂವರು ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆದಿರುತ್ತಾರೆ. ತಾಲೂಕಿನ ಹಟ್ಟಿ ಡಾ.ಇ.ಎ. ಸೀಮಂಡ್ ಪ್ರೌಢಶಾಲೆ ಪ್ರಶಾಂತ ಯೋಗಪ್ಪ 594 ಅಂಕ, ಶೇ 95.04 ಪ್ರತಿಶತ ಫಲಿತಾಂಶ ಪಡೆದಿರುತ್ತಾರೆ. ಮುದಗಲ್ ವಿಜಯ ಮಹಾಂತೇಶ್ವರ ಪ್ರೌಢಶಾಲೆಯ ಅಭಿಲಾಷ ಶರಣಬಸವ 593 ಅಂಕ, ಶೇ 94.88 ಪ್ರತಿಶತ ಫಲಿತಾಂಶ ಹಾಗೂ ಹಟ್ಟಿ ಸಂತ ಅನ್ನಮ್ಮ ಪ್ರೌಢಶಾಲೆಯ ಪ್ರಶಾಂತ ಮರಿಯಪ್ಪ 590 ಅಂಕ, ಶೇ.94.40 ಫಲಿತಾಂಶ ಪಡೆದಿರುತ್ತಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement