ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಧರ್ಮಸ್ಥಳ ಗ್ರಾಮಾಭಿವೃದ್ಧಿಗೆ ವರ್ಷ

Mainashree
Updated On : 15 May 2014, 10:44 am

ಕ.ಪ್ರ. ವಾರ್ತೆ ್ಣ ರಾಯಚೂರು ್ಣ ಮೇ 14
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯನ್ನು ಜಿಲ್ಲೆಯಲ್ಲಿ ಕಾರ್ಯಾರಂಭಿಸಿ ವರ್ಷ ಪೂರೈಸಿದ್ದು, ಸಣ್ಣ ರೈತರ ಸಂಘಟನೆ, ಗ್ರಾಮೀಣ ಮಹಿಳೆಯರ ಸಬಲೀಕರಣ ಕಾರ್ಯದಲ್ಲಿ ಸಂಸ್ಥೆಯು ಪ್ರಗತಿ ಸಾಧಿಸಿದೆ ಎಂದು ಯೋಜನೆಯ ಹೈ.ಕ. ಪ್ರಾದೇಶಿಕ ವಿಭಾಗದ ನಿರ್ದೇಶಕ ಕೆ. ಬೂದಪ್ಪಗೌಡ ತಿಳಿಸಿದರು.
ನಗರದಲ್ಲಿ ಬುಧವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಸ್ಥೆಯು ಭವಿಷ್ಯದಲ್ಲಿ ಯುವಕರನ್ನು ದೃಷ್ಟಿಯಲ್ಲಿರಿಸಿಕೊಂಡು ಉಳಿತಾಯ ಖಾತೆ ಹಾಗೂ ಯುವಕರನ್ನು ಕೃಷಿಯಲ್ಲಿ ತೊಡಗಿಸುವಂಥ ಯೋಜನೆ ಜಾರಿಗೆ ತರಲಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ 5 ಕಡೆ ಸಂಸ್ಥೆಯ ಯೋಜನಾ ಕಚೇರಿಗಳು ಕಾರ್ಯನಿರ್ವಹಿಸುತ್ತಿವೆ. ಈ ಕಚೇರಿಗಳಲ್ಲಿ ಐವರು ಕಚೇರಿ ಪ್ರಬಂಧಕರು, ಕಿರು ಆರ್ಥಿಕ ವ್ಯವಹಾರ ಪ್ರಬಂಧಕರು, 35 ಜನ ಮೇಲ್ವಿಚಾರಕರು, 6 ಜನ ಕೃಷಿ ಮತ್ತು ಹೈನುಗಾರಿಕೆ ಮೇಲ್ವಿಚಾರಕರು, ಐವರು  ಜ್ಞಾನ ವಿಕಾಸ ಸಮನ್ವಯಾಧಿಕಾರಿಗಳು ಸೇರಿ ಒಟ್ಟು 136 ಜನ ಕಾಯಂ ಸಿಬ್ಬಂದಿ ಹಾಗೂ 245 ಜನ ಸೇವಾ ಪ್ರತಿನಿಧಿಗಳಿದ್ದಾರೆಂದು ತಿಳಿಸಿದರು.
ಕಾರ್ಯ ನಿರ್ವಹಣೆ: ಮಹಿಳಾ ಸ್ವಸಹಾಯ ಸಂಘಗಳ ರಚನೆ, ಕಿರು ಆರ್ಥಿಕ ವ್ಯವಹಾರ, ಸ್ವ ಉದ್ಯೋಗ ಚಟುವಟಿಕೆ, ಆರೋಗ್ಯ ವಿಮಾ ಕಾರ್ಯ ಕ್ರಮ, ಕೃಷಿ ಸಂವರ್ಧನೆ, ಸಾಮಾಜಿಕ ಅರಣ್ಯೀಕರಣ, ಪರ್ಯಾಯ ಇಂಧನ ವ್ಯವಸ್ಥೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಂಸ್ಥೆಯು ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿದರು. ಯೋಜನೆಯ ಪಾಲುದಾರ ಕುಟುಂಬಗಳಿಗೆ ಆರ್ಥಿಕ ಅಭಿವೃದ್ಧಿ ಸಾಧಿಸುವ ನಿಟ್ಟಿನಲ್ಲಿ ಐಡಿಬಿಐ ಬ್ಯಾಂಕ್ ಮೂಲಕ 10.66 ಕೋಟಿ ಪ್ರಗತಿ ನಿಧಿ ಸಾಲ ನೀಡಲಾಗಿದೆ. ಜಿಲ್ಲೆಯಲ್ಲಿ 5167 ಮಹಿಳಾ ಸ್ವಸಹಾಯ ಸಂಘ ಸ್ಥಾಪಿಸಲಾಗಿದೆ. 54,567 ಸದಸ್ಯರನ್ನು ಸೇರಿಸಲಾಗಿದೆ ಎಂದು ಹೇಳಿದರು.
ವಿತರಣೆ: ಸಂಘಗಳ ಬಲವರ್ಧನೆಗೆ 6439 ಜನರಿಗೆ ಸಂಘ ನಿರ್ವಹಣಾ ತರಬೇತಿ ನೀಡಲಾಗಿದೆ. 5167 ಸಂಘಗಳಿಗೆ ದಾಖಲೆ ಪುಸ್ತಕಗಳನ್ನು ಉಚಿತವಾಗಿ ನೀಡಲಾಗಿದೆ. ಗ್ರಾಮ ನೈರ್ಮಲ್ಯ ಹಾಗೂ ನಾಗರಿಕ ಪ್ರಜ್ಞೆಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ 8650 ಪ್ರಗತಿಬಂಧು ಸ್ವಸಹಾಯ ಸಂಘ, 43 ಕೋಟಿ  ಪ್ರಗತಿ ನಿಧಿ ಸಾಲ ನೀಡಿಕೆ, 1350 ಶೌಚಾಲಯ ನಿರ್ಮಾಣ, 105 ಗೋಬರ್ ಗ್ಯಾಸ್ ಘಟಕ ಸ್ಥಾಪಿಸಲಾಗುವುದು. 365 ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲು ಯೋಜಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭ ಯೋಜನೆಯ ಜಿಲ್ಲಾ ನಿರ್ದೇಶಕ ಬಿ. ಶೇಖರಗೌಡ, ಯೋಜನಾಧಿಕಾರಿ ಪುರುಷೋತ್ತಮ, ರಾಘವೇಂದ್ರ ಸೇರಿ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement