ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಉದ್ಯೋಗಕ್ಕೆ ಸಾಲ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ'

Lingaraj Badiger
Updated On : 19 May 2014, 11:12 am

ಸಿಂಧನೂರು: ಗ್ರಾಮೀಣ ಪ್ರದೇಶದಲ್ಲಿರುವ ಮಹಿಳಾ ಸ್ವಸಹಾಯ ಗುಂಪುಗಳು ಉದ್ಯಮಶೀಲತೆಗೆ ಆದ್ಯತೆ ನೀಡುವ ಮೂಲಕ ಬ್ಯಾಂಕ್‌ನಿಂದ ಪಡೆದ ಸಾಲವನ್ನು ಸದುಪಯೋಗಪಡಿಸಿಕೊಂಡು, ಸ್ವಾವಲಂಬನೆ ಹೊಂದುವಂತೆ ಆರ್‌ಡಿಸಿಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ವೀರೇಶ ಕರೆ ನೀಡಿದರು.
ತಾಲೂಕಿನ ಕನ್ನಾರಿ ಗ್ರಾಮದಲ್ಲಿ ಆರ್‌ಡಿಸಿಸಿ ಬ್ಯಾಂಕ್ ಮತ್ತು ವಿಜಯ ಸ್ವಶಕ್ತಿ ಮಹಿಳಾ ತಾಲೂಕು ಮಹಾ ಒಕ್ಕೂಟದ ಸಂಯುಕ್ತಾಶ್ರಯದಲ್ಲಿ ನಿರಂತರ ಉಳಿತಾಯ ಮತ್ತು ಸಾಲದ ಸದ್ಬಳಕೆ ಕುರಿತ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಬಡತನ ರೇಖೆಗಿಂತ ಕೆಳಗಿರುವ ಜನಸಮೂಹಕ್ಕೆ ಕಡ್ಡಾಯವಾಗಿ ಸಾಲ ಕೊಡುವಂತೆ ನಬಾರ್ಡ್ ನಿರ್ದೇಶನ ನೀಡಿದ್ದು, ಈ ಅವಕಾಶವನ್ನು ಉಳಿತಾಯ ಸಂಘಗಳು ಉಪಯೋಗಿಸಿಕೊಳ್ಳಬೇಕೆಂದು ಸಲಹೆ ನೀಡಿದರು. ಮುಖ್ಯ ಅತಿಥಿ ಶಿವಣ್ಣ ಹ. ಸಣ್ಣಪ್ಪನವರ್ ಮಾತನಾಡಿ, ಉಳಿತಾಯ ಮಾಡಿದರೆ ಭವಿಷ್ಯದ ಬದುಕು ಆನಂದಮಯವಾಗುತ್ತದೆ ಎಂದರು.
ಕನ್ನಾರಿಯ ಹನುಮಂತ ಅವಧೂತ ಗೃಹಸ್ಥಾಶ್ರಮದ ಸಿದ್ದಪ್ಪ ತಾತ, ಆರ್‌ಡಿಸಿಸಿ ಬ್ಯಾಂಕ್‌ನ ಸ್ವಸಹಾಯ ಸಂಘಗಳ ಮೇಲ್ವಿಚಾರಕ ಲಿಂಗನಗೌಡ, ಶರಣೇಗೌಡ ಗೊರೇಬಾಳ, ಈರಪ್ಪ ಕುರಿ, ಅಮರೇಶ ಹೂಗಾರ, ದೊಡ್ಡನಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement