ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ದಾಸೋಹ ಪದ್ಧತಿ ರೂಢಿಸಿಕೊಳ್ಳಿ: ಕುರಕುಂದಿ

Lingaraj Badiger
Updated On : 19 May 2014, 11:13 am

ಕ.ಪ್ರ. ವಾರ್ತೆ, ಸಿಂಧನೂರು, ಮೇ 18
ಬಸವಾದಿ ಶರಣರು ಹಾಕಿಕೊಟ್ಟಿರುವ ಕಾಯಕ, ದಾಸೋಹ ಪದ್ಧತಿಗಳನ್ನು ಪ್ರತಿಯೊಬ್ಬರು ರೂಢಿಸಿಕೊಳ್ಳಬೇಕಿದೆ ಎಂದು ಬಸವ ಕೇಂದ್ರದ ಗೌರವಾಧ್ಯಕ್ಷ ವೀರಭದ್ರಪ್ಪ ಕುರಕುಂದಿ ಹೇಳಿದರು.
ನಗರದ ಬಸವ ಪ್ರಸಾದ ನಿಲಯದಲ್ಲಿ ಹಮ್ಮಿಕೊಂಡಿದ್ದ 756ನೇ ಮನೆಯಲ್ಲಿ ಮಹಾಮನೆ, ಶರಣ ಕುರುಬ ಗೊಲ್ಲಾಳೇಶ ಜಯಂತಿ ಹಾಗೂ ಲಿಂ. ಪಿ.ವೀರಣ್ಣ ಕುರುಕುಂದಿಯವರ 9ನೇ ನೆನಹು ಕಾಯಕ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಧನೆಗೆ ಬೇಕು ಪರಿಶ್ರಮ: ಛಲದೊಂದಿಗೆ ಪರಿಶ್ರಮಪಟ್ಟರೆ ನಾವು ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ತಮ್ಮ ತಂದೆ ವೀರಣ್ಣನವರು ಕನ್ನಡಿಯಾಗಿ ನಿಲ್ಲುತ್ತಾರೆ. ಪರರ ಸೇವೆಯೇ ನಮ್ಮ ಗುರಿಯಾಗಬೇಕಿದೆ. ಮೇ ತಿಂಗಳಲ್ಲಿ ವಿಶ್ವದಾದ್ಯಂತ ಕಾರ್ಮಿಕ ದಿನಾಚರಣೆ ಮಾಡುತ್ತಾರೆ. ಆದರೆ ನಿಜವಾದ ಕಾಯಕ ಜೀವಿ ಎಂದರೆ ದೇಶಕ್ಕೆ ಅನ್ನ ನೀಡುವ ರೈತ. ರೈತನಿಗೆ ಹೆಚ್ಚಿನ ಮಾನ್ಯತೆ, ಗೌರವ ದೊರೆಯಬೇಕಿದೆ ಎಂದ ಅವರು, ತಮ್ಮ ತಂದೆ ವೀರಣ್ಣನವರು ಅತ್ಯಂತ ಪರಿಶ್ರಮಿಗಳು, ಇತರರ ಏಳಿಗಾಗಿಯೇ ತಮ್ಮ ಜೀವನ ಸವೆದವರು. ಅವರು ಹಾಕಿಕೊಟ್ಟಿರುವ ಮಾರ್ಗದರ್ಶನದಲ್ಲಿ ತಾವು  ನಡೆಯುತ್ತಿರುವುದಾಗಿ ಹೇಳಿದರು.
ಗದಗಿನ ಬಸವರಾಜಪ್ಪ ವೆಂಕಟಾಪುರ ಶರಣರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು. ಬಸವ ಚಾರಿಟಬಲ್ ಟ್ರಸ್ಟ್‌ನ ಧರ್ಮದರ್ಶಿ ಪಂಪನಗೌಡ ಮಲ್ಲಾಪುರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
   ವಕೀಲರಾದ ಕೆ. ವೀರನಗೌಡ, ಪ್ರಹ್ಲಾದ ಗುಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾಯಕ ಜೀವಿಗಳಾದ ಕುರುಕುಂದಾ ಗ್ರಾಮದ ಮಹಾಂತಮ್ಮ ಬಡಿಗೇರ್, ಶಿವಬಸಮ್ಮ ಖಾಸರೆಡ್ಡಿ, ಪದ್ದಮ್ಮ ಅಣಗಿ, ಅನ್ನಮ್ಮ ಚನ್ನಳ್ಳಿ, ಪಾರ್ವತೆಮ್ಮ ಬೇರ್ಗಿ, ಶರಣಮ್ಮ ಹಡಪದ, ಮಾಳಗುಂಡಮ್ಮ ಹೋಟೆಲ್, ನೀಲಮ್ಮ ಬೇರ್ಗಿ, ಮಂಜಮ್ಮ ಬಡಿಗೇರ್, ಶಾವಂತ್ರಮ್ಮ ಹಡಪದ, ಈರಮ್ಮ ನವಲಿ ಅವರನ್ನು ಸನ್ಮಾನಿಸಲಾಯಿತು. ಡಾ. ಶಂಭನಗೌಡ ನಿಡಿಗೋಳ, ಬಸವ ಚಾರಿಟಬಲ್ ಟ್ರಸ್ಟ್‌ನ ಆಡಳಿತಾಧಿಕಾರಿ ಪಂಪಣ್ಣ ಹಳ್ಳಿ ಕಾರ್ಯಕ್ರಮ ನಿರ್ವಹಿಸಿದರು.
ಸನ್ಮಾನ: ಬಸವ ಚಾರಿಟಬಲ್ ಟ್ರಸ್ಟ್ ಅಡಿ ನಡೆಯುವ ಎಲ್‌ಬಿಕೆ ಕಾಲೇಜಿನ ದ್ವಿತೀಯ ಪಿಯುಸಿ ಅಧಿಕ ಅಂಕಗಳಿಸಿದ ರಂಜಿತ್ ಪಾಟೀಲ್, ಅದ್ವಾನಿ ನೃಪತುಂಗ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement