ಪ್ರವಳಿಕಗೆ ಶೇ.91
ಸಿಂಧನೂರು: ನಗರದ ಮೀನಾಕ್ಷಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ಪ್ರವಳಿಕಾ ಸಿ.ಎಚ್. ಶ್ರೀನಿವಾಸ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶೇ 91.32ರಷ್ಟು ಅಂಕ ಪಡೆದಿದ್ದಾಳೆ ಎಂದು ಮುಖ್ಯೋಪಾಧ್ಯಾಯಿನಿ ಚಂದ್ರಕಲಾ ತಿಳಿಸಿದ್ದಾರೆ.
ಪರೀಕ್ಷೆಯಲ್ಲಿ 43 ವಿದ್ಯಾರ್ಥಿಗಳಲ್ಲಿ 38 ಜನ ಪಾಸಾಗಿದ್ದು 32 ಪ್ರಥಮ, 5 ಜನ ದ್ವಿತೀಯ, ಒಬ್ಬ ವಿದ್ಯಾರ್ಥಿ ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.
ಸಿ.ಎಚ್. ಮನೋಜ ಶೇ 84, ಹರೀಶ, ಶ್ರೀದೇವಿ ಮತ್ತು ಪವಿತ್ರ ಶೇ 80.3 ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ವಿದ್ಯಾರ್ಥಿಗಳಿಗೆ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.