ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಶಾಲೆ ಆರಂಭಕ್ಕೆ ಮುನ್ನವೇ ಪಠ್ಯ ಪುಸ್ತಕ

Rashmi Kasaragodu
Updated On : 24 May 2014, 11:45 am

ಲಿಂಗಸ್ಗೂರು: ಶೈಕ್ಷಣಿಕ ವರ್ಷ ಆರಂಭದಲ್ಲೇ ಪಠ್ಯಪುಸ್ತಕ ಮಕ್ಕಳಿಗೆ ತಲುಪಿಸಬೇಕೆಂಬ ಶಿಕ್ಷಣ ಇಲಾಖೆಯ ಸಂಕಲ್ಪ 4-5 ವರ್ಷಗಳ ಎಡೆಬಿಡದ ಪ್ರಯತ್ನಕ್ಕೆ ಕೊನೆಗೂ ಯಶಸ್ಸು ದೊರೆತಿದ್ದು, ಶಾಲಾ ಆರಂಭಕ್ಕೆ ಮುನ್ನವೇ ಮಕ್ಕಳ ಕೈ ಸೇರುವ ಹಂತ ತಲುಪಿದೆ.
ತಾಲೂಕಿನ 1 ರಿಂದ 10ನೇ ತರಗತಿವರೆಗಿನ ಎಲ್ಲ ಶಾಲಾ ಮಕ್ಕಳಿಗೆ 324812 ಉಚಿತ ಹಾಗೂ 65764 ಮಾರಾಟ ಸೇರಿ ಒಟ್ಟು 390576 ಪಠ್ಯ ಪುಸ್ತಕಗಳನ್ನು ಪೂರೈಕೆ ಮಾಡುವಂತೆ ಬೇಡಿಕೆ ಸಲ್ಲಿಸಲಾಗಿತ್ತು.
 ನಇದರಲ್ಲಿ 263732 ಉಚಿತ, 49383 ಮಾರಾಟ ಸೇರಿ ಒಟ್ಟು 313115 ಪಠ್ಯ ಪುಸ್ತಕಗಳನ್ನು ಪೂರೈಕೆ ಮಾಡಲಾಗಿದೆ. ಸಂಬಂಧಿಸಿದ ಸಿಆರ್‌ಸಿ ಮತ್ತು ಶಾಲೆಗಳಿಗೆ ಸರಬರಾಜು ಮಾಡಲಾಗುತ್ತಿದೆ.
 2014-15 ನೇ ಸಾಲಿನ ಹೊಸ ಸಿಲೇಬಸ್ ರೂಪದಲ್ಲಿ ಹೊರಬರುತ್ತಿರುವ 3, 4, 7 ಮತ್ತು 10ನೇ ತರಗತಿ ಪಠ್ಯ ಪುಸ್ತಕಗಳ ಪೈಕಿ 135 ಟೈಟಲ್‌ಗಳಾಗಿದ್ದು, ಈಗಾಗಲೇ ಪೂರೈಕೆ ಕಾರ್ಯ ನಡೆದಿರುತ್ತದೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಮತ್ತು ಕ್ಷೇತ್ರ ಸಮನ್ವಯಾಧಿಕಾರಿಗಳು ಶಾಲೆಗಳಿಗೆ ಪಠ್ಯ ಪುಸ್ತಕ ಪೂರೈಸಲು ಹೆಚ್ಚಿನ ಮುತವರ್ಜಿ ವಹಿಸಿದ್ದಾರೆ. ಈ ಹಿಂದೆ ಪ್ರಾಥಮಿಕ ಮತ್ತು ಪ್ರೌಢ ಸಚಿವರಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಶೈಕ್ಷಣಿಕ ವರ್ಷದ ಆರಂಭದಲ್ಲೇ ಶಾಲಾ ಮಕ್ಕಳಿಗೆ ಪಠ್ಯ ಪುಸ್ತಕ ತಲುಪಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ
ನಡೆಸಿದ್ದರು. ಪಠ್ಯಪುಸ್ತಕ ವಿತರಣಾ ವ್ಯವಸ್ಥೆಯಲ್ಲಿದ್ದ ಅನೇಕ ದೋಷ ನಿವಾರಿಸಿದ್ದರು. ಹಂತ ಹಂತವಾಗಿ ಸುಧಾರಣೆಗೊಂಡ ವ್ಯವಸ್ಥೆ ಈ ಬಾರಿ ಯಶಸ್ವಿಯಾಗಿದೆ.
 ಬರುವ ಶೈಕ್ಷಣಿಕ ವರ್ಷದ ಆರಂಭದಲ್ಲೇ ಪಠ್ಯ ಪುಸ್ತಕಗಳು ಶಾಲಾ ಮಕ್ಕಳ ಕೈಯಲ್ಲಿ ಇರಬೇಕು ಎಂಬ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರ ಆಶಯದಂತೆ ಇದೀಗ ಅಂತಿಮ ಚರಣ ತಲುಪಿದ್ದು, ಶೈಕ್ಷಣಿಕ ವರ್ಷದ ಆರಂಭದಲ್ಲೇ ಪಠ್ಯ ಪುಸ್ತಕಗಳು ಕೈಸೇರುತ್ತಿರುವುದು ಪಾಲಕರು ಹಾಗೂ  ಮಕ್ಕಳಲ್ಲಿ ಸಂತೋಷ ಮೂಡಿಸುವುದಂತೂ ನಿಜ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement