ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಒತ್ತುವರಿ ತೆರವಿಗೆ ನೋಟಿಸ್ ಜಾರಿ

Vishwanath S
Updated On : 30 May 2014, 11:46 am

ಕ.ಪ್ರ. ವಾರ್ತೆ , ಸಿಂಧನೂರು , ಮೇ 29
ಬಳಗಾನೂರಿನ 7ನೇ ವಾರ್ಡ್ ಮಹಿಳೆಯರ ಶೌಚಾಲಯದ ಮುಂದಿನ ಗೋಡೆಯಲ್ಲಿ ಅಳವಡಿಸಲು ಖಾಲಿ ಜಾಗದಲ್ಲಿ ಬಾಗಿಲು- ಕಿಟಕಿಗಳನ್ನು ಅಳವಡಿಸಬೇಕು. ಶೌಚಾಲಯದ ಒಳಗಡೆ ಸ್ನಾನದ ನೀರು ಹರಿಸುವುದನ್ನು ನಿಲ್ಲಿಸಬೇಕೆಂದು ಮಹಿಳೆಯರು ಆಗ್ರಹಿಸಿದ್ದಾರೆ.
ಗ್ರಾಪಂ ಅಭಿವೃದ್ಧಿ ಅಧಿಕಾರಿ ಮುದುಕಪ್ಪ ಸಿ.ಎಚ್. ಮತ್ತು ಗ್ರಾಪಂ ಉಪಾಧ್ಯಕ್ಷ ಎಚ್.ಮಹಾಬಳೇಶ, ಮುಖಂಡ ವಿರುಪಣ್ಣ ಗುತ್ತೇದಾರ್, ಗ್ರಾಪಂ ಸದಸ್ಯ ಕೆ.ನಾಗರಾಜ, ಗ್ರಾಪಂ ಸದಸ್ಯರು ಮತ್ತು ಮುಖಂಡರೊಡನೆ ಶೌಚಾಲಯದ ಸ್ಥಳಕ್ಕೆ ಭೇಟಿ ನೀಡಿದಾಗ ನೂರಾರು ಮಹಿಳೆಯರು ಶೌಚಾಲಯದ ದುಸ್ಥಿತಿಯ ಬಗ್ಗೆ ಮನವರಿಕೆ ಮಾಡಿದರು.
ಶುಚಿಗೊಳಿಸಲು ಒತ್ತಾಯ: ಪೊಲೀಸರೊಂದಿಗೆ ವಾರದ ಹಿಂದೆ ಆಡಳಿತ ಮಂಡಳಿ ತೆರವುಗೊಳಿಸಿಲು ಆಗಮಿಸಿದ್ದು ಅರ್ಧ ತೆರವುಗೊಳಿಸದೆ ಹಿನ್ನಡೆದಿದ್ದನ್ನು ಖಂಡಿಸಿದರು. ಅಂದಿನಿಂದ ಮಹಿಳೆಯರು ಶೌಚಕ್ಕೆ ತೆರಳಿದಾಗ ಕಲ್ಲು ಬೀಳುತ್ತಿವೆ. ಮಹಿಳೆಯರು ಭಯದಿಂದ ಶೌಚಕ್ಕೆ ತೆರಳುವಂತಾಗಿದೆ. ಶೀಘ್ರದಲ್ಲಿ ತೆರವಿಗೆ ಮುಂದಾಗಿ ಶೌಚಾಲಯವನ್ನು ಶುಚಿಗೊಳಿಸುವಂತೆ ಒತ್ತಾಯಿಸಿದರು.
ರುದ್ರಪ್ಪ ಮರೆಡ್ಡಿ ಮಾತನಾಡಿ, ಕೆಳಭಾಗದಲ್ಲಿರುವ ಮಣ್ಣಿನ ಮನೆಗಳು ಬಸಿ ಹಿಡಿದು ಬೀಳುವ ಹಂತಕ್ಕೆ ತಲುಪಿವೆ. ಶೌಚಾಲಯದ ಕಡೆಗೆ ಹರಿಯುವ ನೀರನ್ನು ಬಂದ್ ಮಾಡಿಸುವಂತೆ, ಒತ್ತುವರಿಯಾಗಿರುವುದನ್ನು ತೆರವುಗೊಳಿಸುವಂತೆ ಪಿಡಿಒಗೆ ತಿಳಿಸಿದರು.
ಭರವಸೆ: ಜಮಾಯಿಸಿದ ಮಹಿಳೆಯರು ಪಿಡಿಒ ಅವರನ್ನು ಸುತ್ತುವರಿದು ಶೀಘ್ರ ಕ್ರಮಕ್ಕೆ ಮುಂದಾಗದಿದ್ದರೆ ಗ್ರಾಪಂ.ಗೆ ಮುತ್ತಿಗೆ ಹಾಕಿ ಉಗ್ರ ಹೋರಾಟಕ್ಕಿಳಿಯುವದಾಗಿ ಎಚ್ಚರಿಸಿದರು. ಇದೇ ವೇಳೆ ಮಹಿಳೆಯರೊಂದಿಗೆ ಮಾತನಾಡಿದ ಪಿಡಿಒ ಮುದುಕಪ್ಪ, ಸಮಸ್ಯೆ ಪರಿಹಾರಕ್ಕೆ ಕಾಲಾವಕಾಶ ಕೋರಿ ಸೂಕ್ತ ಕ್ರಮ ಕೈಗೊಳ್ಳತ್ತೇವೆ ಎಂದು ಭರವಸೆ ನೀಡಿದರು.
ನೋಟಿಸ್: ಶೌಚಾಲಯಕ್ಕೆ ಹೊಂದಿಕೊಂಡಿರುವಂತೆ ಸ್ಥಳ ಒತ್ತುವರಿ ಮಾಡಿರುವುದನ್ನು ತೆರವುಗೊಳಿಸಲು, ಶೌಚಾಲಯಕ್ಕೆ ಮುಖ ಮಾಡಿ ನಿರ್ಮಿಸಿಕೊಂಡಿರುವ ಮನೆ ಕಿಡಕಿ ಬಾಗಿಲುಗಳನ್ನು 7 ದಿನಗಳೊಳಗಾಗಿ ಮುಚ್ಚಿಕೊಳ್ಳುವಂತೆ ನೋಟಿಸ್ ಇಂದೇ ಜಾರಿ ಮಾಡಲಾಗುವುದು. ಸಹಕರಿಸಿ ತೆರವುಗೊಳಿಸದಿದ್ದರೆ ಕರ್ನಾಟಕ ಗ್ರಾಪಂ ಅಧಿನಿಯಮ 1993ರ ಪ್ರಕಾರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಈ ವೇಳೆ ಮುಖಂಡರಾದ ಗೋವಿಂದರೆಡ್ಡಿ ಗದ್ದಿ, ರುದ್ರಪ್ಪ ಮರೆಡ್ಡಿ, ಜಡಿಯಪ್ಪ ಗದ್ದಿ, ಬಸಣ್ಣ ಗಬ್ಬೂರು, ಪಂಪಣ್ಣ ದಡ್ಯಾಳ, ಡಿ.ಹನುಮಂತಪ್ಪ ಟಿ., ಅಮರೇಶ ನಾಯಕ್, ಶಿವರುದ್ರಪ್ಪ, ಅಡಿವೆಮ್ಮ, ಮುತ್ತಮ್ಮ, ನೀಲಮ್ಮ, ಗುಂಡಮ್ಮ, ನಿಂಗಮ್ಮ ವಿರುಪಾಕ್ಷಪ್ಪ ದಡ್ಯಾಳ, ಗದ್ದಿ ಯಂಕಪ್ಪ, ಗದ್ದಿ ವಿರುಪಾಕ್ಷಿ ಮತ್ತಿತರ ವಾರ್ಡ್‌ನ ಮಹಿಳೆಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement