ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮುದಗಲ್ ಬಸ್ ನಿಲ್ದಾಣವೋ.. ಹಂದಿಗಳ ತಾಣವೋ.. ಛೀ, ಥೂ...

Vishwanath S
Updated On : 30 May 2014, 11:47 am

ಮುದಗಲ್: ಪಟ್ಟಣಕ್ಕೆ ಎರಡು ಸುತ್ತಿನ ಕೋಟೆ ಕೈಬೀಸಿ ಇತಿಹಾಸ ಸಾರುವುದಕ್ಕಾಗಿ ಪ್ರಯಾಣಿಕರನ್ನು ಕರೆಯುವಂತಾದರೆ ಬಸ್ ನಿಲ್ದಾಣದ ಒಳಗೆ ಬಂದರೆ ಬಸ್ ನಿಲ್ದಾಣವೋ... ಹಂದಿಗಳ ತಾಣವೋ... ಎನ್ನುವ ಭಾವನೆ ಪ್ರಯಾಣಿಕರಲ್ಲಿ ಬರುವಂತಾಗಿದೆ.
ಪಟ್ಟಣದ ಬಸ್ ನಿಲ್ದಾಣ ಮೂಲಕ ದಿನಂಪ್ರತಿ ನೂರಾರು ಬಸ್‌ಗಳು ಸಂಚರಿಸುವುದಲ್ಲದೇ ಮಹಾರಾಷ್ಟ್ರ, ಆಂಧ್ರಪ್ರದೇಶಗಳಂತಹ ಅಂತಾರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯ ಮಾರ್ಗವಾಗಿದೆ. ಅಂತಾರಾಜ್ಯ ಪ್ರಯಾಣಿಕರು ಪ್ರಯಾಣ ಮಾಡುವಾಗ ಪಟ್ಟಣಕ್ಕೆ ಆಗಮಿಸುತ್ತಿದ್ದಂತೆ ಬೆಳಗಾವಿ ರಾಜ್ಯ ಹೆದ್ದಾರಿಯಲ್ಲಿ ಎರಡು ಸುತ್ತಿನ ಕೋಟೆ ಇತಿಹಾಸ ಸಾರುವಂತೆ ಕೈಬೀಸಿ ಕರೆಯುತ್ತಿದೆ. ಆದರೆ ಎನ್‌ಇಕೆಎಸ್‌ಆರ್‌ಟಿಸಿ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಗುರಿಯಾದ ಈ ಬಸ್ ನಿಲ್ದಾಣ ನವೀಕರಣಗೊಳದೇ ಇರುವದಕ್ಕೆ ಸಾಕ್ಷಿಯಾಗಿದೆ. ಅಲ್ಲದೇ ಬಸ್ ನಿಲ್ದಾಣದ ಸುತ್ತಮುತ್ತಲೂ ಇರುವ ಬಯಲು ಜಾಗ ಮಳೆ ನೀರಿನಿಂದ ಕೆಸರು ಗದ್ದೆಯಾಗಿ ಮಾರ್ಪಟ್ಟಿರುವುದರ ಜೊತೆಗೆ ಕಸ-ಕಡ್ಡಿಗಳು ಅಲ್ಲಿಯೇ ಬಿದ್ದಿರುವುದರಿಂದ ಬಸ್ ನಿಲ್ದಾಣವೋ... ಹಂದಿಗಳ ತಾಣವೋ... ಎನ್ನುವಂತೆ ಆಗಿದೆ.
ಬಸ್ ನಿಲ್ದಾಣದಲ್ಲಿಯ ಪ್ರಯಾಣಿಕರು ದುರ್ನಾತ ಅನುಭವಿಸಿ ಅಧಿಕಾರಿಗಳಿಗೆ ಹಿಡಿಶಾಪ ಹಾಕುವಂತಾಗಿದೆ. ಬಸ್ ನಿಲ್ದಾಣದಲ್ಲಿ ಅರ್ಧಮರ್ಧ ಸಿಸಿ ರಸ್ತೆ ನಿರ್ಮಿತವಾಗಿದ್ದು, ಸುತ್ತಮುತ್ತಲೂ ಗ್ರಾಮೀಣ ಬಸ್ ಪ್ರಯಾಣಿಕರಿಗೆ ಬಸ್ ಶೆಲ್ಟರ್ ನಿರ್ಮಾಣಕ್ಕೆ ಅಂತ ಹಾಗೆಯೇ ಜಾಗ ಬಿಡಲಾಗಿದೆ. ಆದರೆ ಅಲ್ಲಿ ಬಸ್ ಶೆಲ್ಟರ್ ನಿರ್ಮಿಸದೇ ಇರುವುದರಿಂದ ಆ ಜಾಗ ಕೂಡ ಸಾಂಕ್ರಾಮಿಕ ರೋಗ ತರುವಂತಹ ಪ್ರದೇಶವಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳಾಗಲಿ, ಸ್ಥಳೀಯ ಅಧಿಕಾರಿಗಳಾಗಲಿ ಬಸ್ ನಿಲ್ದಾಣ ಆವರಣದಲ್ಲಿ ಗಿಡ-ಗಂಟೆ ನೆಟ್ಟು ಸೌಂದರೀಕರಣಕ್ಕೆ ಮುಂದಾಗದೇ ಇರುವುದು ಯಾವ ಕಾರಣಕ್ಕೆ ಎನ್ನುವುದು ತಿಳಿಯದಾಗಿದೆ. ಇನ್ನಾದರೂ ಹಿರಿಯ ಅಧಿಕಾರಿಗಳು ಬಸ್ ನಿಲ್ದಾಣದ ನವೀಕರಣಕ್ಕೆ ಮುಂದಾಗುವರೇ ಕಾದು ನೋಡಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement