ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಹಿಳೆಯರು ಸ್ವಾವಲಂಬಿಗಳಾಗಲಿ

Rashmi Kasaragodu
Updated On : 31 May 2014, 12:42 pm

ಮುದಗಲ್: ಪ್ರಸ್ತುತ ಕಂಪ್ಯೂಟರ್ ಯುಗದಲ್ಲಿ ಮಹಿಳೆಯರು ಪುರುಷರಿಗಿಂತಲೂ ಮೇಲುಗೈ ಸಾಧಿಸುತ್ತಿದ್ದಾರೆ. ಸಮಾಜದಲ್ಲಿ ಪ್ರತಿಯೊಂದು ಕ್ಷೇತ್ರಗಳಲ್ಲೂ ಮಹಿಳೆಯರಿಗೆ ಸಮಾನವಾದ ಪ್ರಾತಿನಿಧ್ಯ ಲಭಿಸಿದೆ ಎಂದು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಭಾಸ್ಕರ್ ಅಭಿಪ್ರಾಯಪಟ್ಟರು.
ಮುದಗಲ್‌ನ ಮಹಾಂತೇಶ್ವರ ಮಠದಲ್ಲಿ ಮಹಿಳೆಯರಿಗಾಗಿ ಹಮ್ಮಿಕೊಳ್ಳಲಾಗಿದ್ದ ಜ್ಞಾನ ವಿಕಾಸ ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸಿ ಮಾತನಾಡಿದರು. ಸಮಾಜವನ್ನು ತಿದ್ದಿ ಮುನ್ನಡೆಸುವ ಕಾಯಕದಲ್ಲಿ ಮಹಿಳೆಯರ ಪಾತ್ರ ಹಿರಿದಾಗಿದೆ. ಮಹಿಳೆಯರೆಲ್ಲಾ ಧೈರ್ಯ ಹಾಗೂ ಆತ್ಮಸ್ತೈರ್ಯದಿಂದಿರಬೇಕೆಂದರು.
ತಾಯಿ ತನ್ನ ಮಗುವಿನ ಸಂರಕ್ಷಣೆ ಯಾವ ರೀತಿ ಮಾಡುವಳೋ, ಅದೇ ರೀತಿಯಾಗಿ ಮಗು ಬೆಳೆಯುತ್ತದೆ ಎಂದರು. ಇದೇ ಸಂದರ್ಭದಲ್ಲಿ ಧರ್ಮಸ್ಥಳದ ಮಾತೋಶ್ರೀ ಹೇಮಾವತಿ ಅವರ ಬಗ್ಗೆ ಮಾಹಿತಿ ನೀಡಲಾಯಿತು. ಶಿಕ್ಷಕ ಶರಣಬಸವ ಗುಡಿ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ಶ್ರಮಿಸುತ್ತಿರುವ ಧರ್ಮಸ್ಥಳದ ಸಂಸ್ಥೆಯ ಕಾರ್ಯವನ್ನು ಶ್ಲಾಘಿಸಿದರು. ಲಿಂಗಸ್ಗೂರು ವಲಯದ ಮೇಲ್ವಿಚಾರಕ ಈರಣ್ಣ, ಮಹಿಳಾ ಒಕ್ಕೂಟದ ಅಧ್ಯಕ್ಷೆ ತೋಟಮ್ಮ, ಮುದಗಲ್ ವಲಯದ ವಿಜಯಲಕ್ಷ್ಮೀ ಮಡಿವಾಳರ, ಶಾರದಾ ಪಟ್ಟಣಶೆಟ್ಟಿ, ಕವಿತಾ ಸಿಂಣೆ ಸೇರಿದಂತೆ ನೂರಾರು ಮಹಿಳೆಯರು ಕಾರ್ಯಾಗಾರದಲ್ಲಿ ಮಾಹಿತಿ ಪಡೆದರು. ಒಕ್ಕೂಟದ ಸದಸ್ಯರಾದ ಕಾವೇರಿ, ಶಕುಂತಲಾ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement