ಯಶಸ್ವಿನಿ ಯೋಜನೆಗೆ ನೋಂದಣಿ
ಗುಲ್ಬರ್ಗ:ಯಶಸ್ವಿನ ಸಹಕಾರಿ ರೈತರ ಆರೋಗ್ಯ ಯೋಜನೆಯಡಿ 2014-15 ನೇ ಸಾಲಿಗೆ ನೋಂದಾಯಿಸಿ ಸದಸ್ಯತ್ವ ಪಡೆಯಲು ಮೇ 31 ಕೊನೆಯ ದಿನವಾಗಿದೆ ಎಂದು ಸಹಕಾರ ಸಂಘಗಳ ಉಪನಿಬಂಧಕ ವಿಶ್ವನಾಥ ಎಂ ಮಲ್ಕೂಡ ಅವರು ತಿಳಿಸಿದ್ದಾರೆ. ಗುಲ್ಬರ್ಗ ಜಿಲ್ಲೆ ನಗರ ಪ್ರದೇಶದ ಅರ್ಹ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವವರಿಗೆ ಯಶಸ್ವಿನಿ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆಯಡಿಯಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ವಾರ್ಷಿಕ ವಂತಿಕೆ 1010 ರು. ಪಾವತಿಸಿ ಸದಸ್ಯರಾಗಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು 80 ರು. ಪಾವತಿಸಬೇಕು. ಯಶಸ್ವಿನಿ ಸಹಕಾರಿ ಆರೋಗ್ಯ ರಕ್ಷಣಾ ಯೋಜನೆಯಡಿಯಲ್ಲಿ ಕುಟುಂಬದ ಪ್ರತಿಯೊಬ್ಬ ಸದಸ್ಯರು ವಾರ್ಷಿಕ ವಂತಿಕೆ 250 ರು. ಪಾವತಿಸಿ ಈ ಯೋಜನೆಯ ಸದಸ್ಯರಾಗಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು 50 ರು. ಪಾವತಿಸಿ ಸದಸ್ಯರಾಗಬೇಕು.