ವಸತಿ ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಗುಲ್ಬರ್ಗ: ಆಳಂದ ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ಸರ್ಕಾರಿ ಮತ್ತು ಅನುದಾನಿತ ಮೆಟ್ರಿಕ್ಪೂರ್ವ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿಯಿರುವ ಸ್ಥಳಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಸರ್ಕಾರಿ ಮೆಟ್ರಿಕ್ಪೂರ್ವ ಬಾಲಕರ ವಸತಿ ನಿಲಯ ಆಳಂದ, ಕಡಗಂಚಿ, ಬೆಳಮಗಿ, ಚಿಂಚನಸೂರ, ಮಾಡಿಯಾಳ, ಮಾದನಹಿಪ್ಪರ್ಗಾ, ಮುದ್ದಡಗಾ, ಕಮಲಾನಗರ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯ ಆಳಂದ ಹಾಗೂ ಸರ್ಕಾರಿ ಆಶ್ರಮ ಶಾಲೆ ಕೋರಳ್ಳಿ ತಾಂಡಾ ಹಾಗೂ ಜ್ಞಾನಜ್ಯೋತಿ ಮೆಟ್ರಿಕ್ಪೂರ್ವ ವಿದ್ಯಾರ್ಥಿನಿಲಯ ಆಳಂದ ಹಾಗೂ ನಿಂಬರ್ಗಾ, ಅಮೋಘ ಸಿದ್ದೇಶ್ವರ ಮೆಟ್ರಿಕ್ಪೂರ್ವ ವಸತಿ ನಿಲಯ ಆಳಂದ, ಲಮಾಣಿ ವಸತಿಗೃಹ ಆಳಂದ, ಸಿದ್ದೇಶ್ವರ ಮೆಟ್ರಿಕ್ಪೂರ್ವವಸತಿ ನಿಲಯ ಲಾಡ ಚಿಂಚೋಳಿ ಮತ್ತು ಕಲ್ಲೇಶ್ವರ ಮೆಟ್ರಿಕ್ಪೂರ್ವ ವಸತಿ ನಿಲಯ ತಡೋಳಾ ವಿದ್ಯಾರ್ಥಿ ನಿಲಯಗಳಲ್ಲಿ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆಗೆ ಜೂ.10 ಕೊನೆಯ ದಿನವಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಳಂದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.