ಸವಿತಾ ನಿಗಮ ಮಂಡಳಿ ಸ್ಥಾಪನೆಗೆ ಮನವಿ
ಗುಲ್ಬರ್ಗ: ಸವಿತಾ ಸಮಾಜದ ನಿಗಮ ಮಂಡಳಿಯನ್ನು ಸ್ಥಾಪಿಸಬೇಕೆಂದು ಜಿಲ್ಲಾ ಯುವಕ ಸವಿತಾ ಸಮಾಜ ಮಂಗಳವಾರ ಜಿಲ್ಲಾಧಿಕಾರಿಗಳ ಆವರಣದಲ್ಲಿ ಒಂದು ದಿನದ ಸಾಂಕೇತಿಕ ಧರಣಿ ಮಾಡುವುದರ ಮೂಲಕ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯಮಂತ್ರಿಗೆ ಮನವಿ ಮಾಡಿದೆ.
ಸವಿತಾ ಸಮಾಜದ ಜನಾಂಗವು ಆರ್ಥಿಕವಾಗಿ , ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ಇಲ್ಲಿಯವರೆಗೂ ಸಬಲಿಕರಣವಾಗಿಲ್ಲ. ಆದಕಾರಣ ಸವಿತಾ ಸಮಾಜ ನಿಗಮ ಮಂಡಳಿಯ ಅವಶ್ಯಕತೆಯಿದ್ದು, ಕೂಡಲೇ ನಿಗಮವನ್ನು ಸ್ಥಾಪಿಸಬೇಕು. ಸವಿತಾ ಸಮಾಜದ ಜನಾಂಗವನ್ನು ಪ್ರವರ್ಗ-1 ಕ್ಕೆ ಸೇರಿಸಲು ಮೆಲ್ಮನವಿ ಸಲ್ಲಿಸಿ ಹೋರಾಟ ಮಾಡಿದರೂ ಪ್ರಯೋಜನವಾಗಲಿಲ್ಲ, ಮೇಲ್ಮನವಿ ಸಲ್ಲಿಸಬೇಕು. ಒಂದು ವೇಳೆ ಸವಿತಾ ಸಮಾಜಕ್ಕಾಗಿ ನಿಗಮ ಸ್ಥಾಪಿಸಲು ವಿಳಂಬವಾದರೆ ರಾಜ್ಯಾದ್ಯಂತ ಉಗ್ರ ಹೋರಾಟ ಕೈಗೊಳ್ಳಲಾಗುವುದೆಂದು ಅಧ್ಯಕ್ಷ ರಾಕೇಶ ಪಿ. ಅಷ್ಟಗಿ ತಿಳಿಸಿದ್ದಾರೆ.
ಪ್ರಧಾನ ಕಾರ್ಯದರ್ಶಿ ವಿಠಲ ಎಮ್.ಶಾಹಪೂರಕರ್, ಅಧ್ಯಕ್ಷ ಸುಭಾಸ್.ಬಿ.ಬದಾಮಿ, ಪ್ರಧಾನ ಕಾರ್ಯದರ್ಶಿ ಅಂಬರೇಶ.ಎಸ್.ಮಂಗಲಗಿ, ರಾಮು.ವಿ.ನವಲಗಿ, ಅಶೋಕ ಡೈಮಂಡ ಮುಂತಾದವರು ಉಪಸ್ಥಿತರಿದ್ದರು.