ನೂತನ ಗ್ರಂಥಾಲಯ
ಶಿವಮೊಗ್ಗ: ಶ್ರೀ ವಿವೇಕಾನಂದರ 150ನೇ ಜನ್ಮ ದಿನದ ಅಂಗವಾಗಿ ತಿಲಕ ನಗರದ ಶ್ರೀ ಪರಮಹಂಸ ನಿಲಯದಲ್ಲಿ ಶ್ರೀ ಗಧಾದರ ಗ್ರಂಥಾಲಯ ತೆರೆಯಲಾಗಿದೆ. ಗ್ರಂಥಾಲಯದಲ್ಲಿ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಪ್ರಕಟಗೊಂಡ ಸಾಹಿತ್ಯಕ್ಕೆ ಸಂಬಂಧಿಸಿದ ಪುಸ್ತಕ ಹಾಗೂ ಕ್ಯಾಸೆಟ್ಗಳು ದೊರೆಯಲಿವೆ. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಇದರ ಸದುಪಯೋಗ ಪಡೆಯುವಂತೆ ಶ್ರೀ ಪರಮಹಂಸ ನಿಲಯದ ಎಚ್.ಎ. ಭವೇಂದ್ರ ಕುಮಾರ್ ತಿಳಿಸಿದ್ದಾರೆ. ವಿವರಗಳಿಗಾಗಿ- 08182-278116.
ವಿದ್ಯುತ್ವ್ಯತ್ಯಯ
ಶಿವಮೊಗ್ಗ: ಮೆಸ್ಕಾಂ ಏ.4 ರಂದು ಬೆಳಿಗ್ಗೆ 9 ರಿಂದ ಮಧ್ಯಾಹ್ನ 3 ಗಂಟೆವರೆಗೆ ನಗರದ ವಿವಿಧೆಡೆ ವಿದ್ಯುತ್ವ್ಯತ್ಯಯವಾಗಲಿದೆ ಎಂದು ತಿಳಿಸಿದೆ. ಎಂಆರ್ಎಸ್ನ ವಿದ್ಯುತ್ ವಿತರಣಾ ಕೇಂದ್ರದಲ್ಲಿನ 11 ಕೆ.ವಿ. ಎಬಿಸಿ ಕೇಬಲ್ ತುರ್ತು ನಿರ್ವಾಹಣಾ ಕಾರ್ಯವಿರುವುದರಿಂದ ವಿದ್ಯುತ್ ಕಡಿತ ಮಾಡಲಾಗಿದ್ದು, ನೆಹರೂ ಕ್ರೀಡಾಂಗಣ ಸಮೀಪ, ಜಯನಗರ, ದುರ್ಗಿಗುಡಿ, ಬಿಎಚ್ ರಸ್ತೆ, ತಿಲಕ ನಗರ, ಪಾರ್ಕ್ ಬಡಾವಣೆ, ಟ್ಯಾಂಕ್ ಮೊಹಲ್ಲಾ, ಬಾಪೂಜಿ ನಗರ, ಡಿ.ಸಿ. ಕಚೇರಿ, ಶಂಕಮಠ ರಸ್ತೆ, ಸೋಮಯ್ಯ ಲೇಔಟ್, ಎ.ಎ. ಕಾಲೋನಿ, ಸವಳಂಗ ರಸ್ತೆ, ರವೀಂದ್ರ ನಗರ, ರಾಜೇಂದ್ರ ನಗರ, ವಿದ್ಯಾನಗರ, ಗುಂಡಪ್ಪಶೆಡ್, ಶೇಷಾದ್ರಿಪುರಂ, ಪುರಲೆ, ಗುರುಪುರ, ಗಣಪತಿ ಲೇಜೌಟ್, ಚಿಕ್ಕಲ್, ವೆಂಕಟೇಶ್ವರ ನಗರ, ಮಂಜುನಾಥ ಬಡಾವಣೆ, ರಾಜೀವ್ ಗಾಂಧಿ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂನ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
ಏಪ್ರಿಲ್ 2ರಿಂದ 4ರವರೆಗೆ ಘಟಕ-4, ನ.ಉ.ವಿ-2ರ ವ್ಯಾಪ್ತಿಯಲ್ಲಿ ಹೊಸ ಸಂಪರ್ಕ ಅಳವಡಿಸಲು ಮತ್ತು ಹಳೆಯ ವಿದ್ಯುತ್ ಕಂಬಗಳನ್ನು ಬದಲಾಯಿಸುವುದರಿಂದ ಬೆಳಿಗ್ಗೆ 9ರಿಂದ ಸಂಜೆ 6ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ತಿಳಿಸಿದೆ. ಎಸ್.ಪಿ.ಎಂ.ರಸ್ತೆ, ಓ.ಟಿ.ರಸ್ತೆ, ಮಾರಿಗದ್ದಿಗೆ ಸುತ್ತಮುತ್ತ, ಲಷ್ಕರ್ ಮೊಹಲ್ಲಾ, ಶಿವಾಜಿ ಪಾರ್ಕ್, ಕೊಲ್ಲೂರಯ್ಯ ರಸ್ತೆ, ತುಳಜಾ ಭವಾನಿ ರಸ್ತೆ, ರಾಮಣ್ಣ ಶ್ರೇಷ್ಠಿ ಪಾರ್ಕ್ ಹತ್ತಿರ, ತಿರುಪಳಯ್ಯನ ಬೀದಿ, ಅಶೋಕ ರಸ್ತೆ, ನಾಗಪ್ಪನ ಕೇರಿ, ಗಂಗಾ ಪರಮೇಶ್ವರಿ ರಸ್ತೆ, ಆನವೇರಪ್ಪನ ಕೇರಿ, ಧರ್ಮರಾಯನ ಕೇರಿ, ಆಲೇಮಾನ್ ಕೇರಿ, ಕೃಷ್ಣ ಕೆಫೆ ಹಿಂಭಾಗ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ತಿಳಿಸಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.