ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಹರಾಜು ಮುಂದೂಡಿಕೆಗೆ ಅಸಮಾಧಾನ

Lingaraj Badiger
Updated On : 2 Apr 2013, 10:54 am

ಕ.ಪ್ರ.ವಾರ್ತೆ, ಸೊರಬ, ಏ.1
ತಾಲೂಕಿನ ಆನವಟ್ಟಿ ಗ್ರಾಪಂ ವ್ಯಾಪ್ತಿಯ ಸಂತೆ ಸುಂಕ ವಸೂಲಿ, ಮಳಿಗೆ ಹರಾಜು ಪ್ರಕ್ರಿಯೆ ಮುಂದೂಡಿರುವುದರಿಂದ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
 ಈ ಹಿಂದೆಯೂ ಒಮ್ಮೆ ಹರಾಜು ಪ್ರಕ್ರಿಯೆ ರದ್ದಾಗಿದ್ದು, ಈಗಲೂ ಮತ್ತೆ ರದ್ದಾಗಿರುವುದು ಹರಾಜು ಪ್ರಕ್ರಿಯೆ ಎದುರು ನೋಡುತ್ತಿದ್ದ ಸಾರ್ವಜನಿಕರ ಆಕ್ರೋಷಕ್ಕೆ ಕಾರಣವಾಗಿದೆ. ಮಾ. 28ರಂದು ಹರಾಜು ಪ್ರಕ್ರಿಯೆ ನಡೆಯಬೇಕಿತ್ತು, ಆದರೆ ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ.
  ಈ ವೇಳೆ ಮೂಲ ಸೌಕರ್ಯಗಳ ಹೊರತಾಗಿ ಆಡಳಿತಾತ್ಮಕ ಮಂಜೂರು ಹಾಗೂ ಸರ್ಕಾರದ ಯೋಜನೆಗಳ ಸರ್ವೆ ಕಾರ್ಯ ನಡೆಸಲು ಅವಕಾಶವಿಲ್ಲ ಎಂದು ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ ನೀಲಪ್ಪ ಭೂತಣ್ಣನವರ್ ತಿಳಿಸಿದ್ದಾರೆ.
 ಚುನಾವಣೆ ನೀತಿ ಸಂಹಿತೆ ಹಿಂಪಡೆದ ಬಳಿಕ ಸಾಮಾನ್ಯ ಸಭೆ ಕರೆದು ದಿನಾಂಕ ನಿಗದಿಪಡಿಸಲಾಗುವುದು. ಸಾರ್ವಜನಿಕರು ಇದಕ್ಕೆ ಸಹಕರಿಸಬೇಕು ಎಂದು ಗ್ರಾಪಂ ಅಧ್ಯಕ್ಷೆ ಗಿರಿಜಮ್ಮ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement