ರಸ್ತೆ ಅಪಘಾತ ಚಾಲಕ ಸಾವು
ಶಿವಮೊಗ್ಗ: ವೇಗವಾಗಿ ಬಂದ ಲಾರಿಯೊಂದು ರಸ್ತೆ ಬದಿಯ ಮರವೊಂದಕ್ಕೆ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಸಕ್ರೆಬೈಲು ಬಳಿ ನಡೆದಿದೆ.
ಭದ್ರಾವತಿಯ ಸೀಗೆಬಾಗಿ ಗ್ರಾಮದ ನಿವಾಸಿ ಮುಜಾಮಿಲ್ಪಾಶ (30) ಮೃತಪಟ್ಟವರು. ತೀರ್ಥಹಳ್ಳಿಯಿಂದ ಶಿವಮೊಗ್ಗದ ಕಡೆ ಮರದ ತುಂಡುಗಳನ್ನು ಲಾರಿಯಲ್ಲಿ ತರುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಚಾಲಕ ಸಕ್ರೆಬೈಲು ಬಳಿ ಮರಕ್ಕೆ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಪ್ರಕರಣ ತುಂಗಾ ನಗರ ಠಾಣೆಯಲ್ಲಿ ದಾಖಲಾಗಿದೆ.
--