ಶೈಕ್ಷಣಿಕ ಸಮಾರೋಪ ಕಾರ್ಯಕ್ರಮ
ಶಿವಮೊಗ್ಗ: ಪೋದಾರ್ ಎನ್ರಿಚ್ಮೆಂಟ್ ಅಕಾಡೆಮಿ ವಿವಿಧ ಶೈಕ್ಷಣಿಕ ಕಾರ್ಯಕ್ರಮದ ಸಮಾರೋಪ ಸಮಾರಂಭ ಏರ್ಪಡಿಸಿತ್ತು.
ಕಾರ್ಯಕ್ರಮದಲ್ಲಿ ಕುವೆಂಪು ವಿಶ್ವವಿದ್ಯಾಲಯದ ಪ್ರೊ. ಧನಂಜಯ ಮಾತನಾಡಿ, ಪೋದಾರ್ ಶಾಲೆ ಹಮ್ಮಿಕೊಂಡಿರುವ ಕಾರ್ಯಕ್ರಮಗಳು ಶ್ಲಾಘನೀಯ. ಈ ರೀತಿಯ ಶಿಕ್ಷಣವನ್ನು ಸಮಾಜದ ಎಲ್ಲಾ ವರ್ಗದವರಿಗೂ ನೀಡುತ್ತಿರುವುದು ಉತ್ತಮ ಬೆಳವಣಿಗೆ ಎಂದರು.
ಇಂಗ್ಲಿಷ್ ಭಾಷಾ ಕಲಿಕೆ, ಏರೋಬಿಕ್ಸ್, ಕಂಪ್ಯೂಟರೈಸ್ಡ್ ಎಂಬ್ರೈಡರಿ ಹಾಗೂ ಕಂಪ್ಯೂಟರ್ ತರಬೇತಿ ಪಡೆದ ಎಲ್ಲಾ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ನೀಡಲಾಯಿತು.
ಏರೋಬಿಕ್ಸ್ ವಿದ್ಯಾರ್ಥಿಗಳಿಂದ ಆಗುವುದೆಲ್ಲಾ ಒಳಿತಿಗಾಗಿ ಎಂಬ ಸಾಮಾಜಿಕ ನಾಟಕ ಪ್ರದರ್ಶನ ಏರ್ಪಡಿಸಲಾಯಿತು.
ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯ ವೆಂಕ್ಯಾನಾಯ್ಕ, ಶಾಲೆಯ ಪ್ರಾಂಶುಪಾಲ ಸಿ.ಎಸ್. ಶಿವಾನಂದ್, ಶಾರದಾ ನಾಯಕ್, ಸುನೀತ, ಗೌರಿ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.