ನಷ್ಟ ಪರಿಹಾರಕ್ಕೆ ಆಗ್ರಹಿಸಿ ಪ್ರತಿಭಟನೆ
ಶಿಕಾರಿಪುರ: ಕಂಬಳಿ ಹುಳುವಿನ ಭಾದೆ ತಪ್ಪಿಸಲು ಎಕರೆ ಮೆಣಸಿನ ಗಿಡಕ್ಕೆ ಖಾಸಗಿ ಅಂಗಡಿಯಲ್ಲಿ ಖರೀದಿಸಿದ ಕಳಪೆ ಔಷಧ ಹಾಗೂ ಗೊಬ್ಬರದ ಪ್ರಭಾವದಿಂದಾಗಿ ಸಂಪೂರ್ಣ ಗಿಡ ನಾಶವಾಗಿದ್ದು, ಅಂಗಡಿಯ ವಿರುದ್ಧ ಕಾನೂನು ಕ್ರಮದ ಜತೆಗೆ ಪರಿಹಾರ ದೊರಕಿಸುವಂತೆ ತಾಲೂಕಿನ ಹೊಸೂರು ಹೋಬಳಿಯ ಬೇಗೂರು ದೊಡ್ಡ ತಾಂಡಾದ ಕೃಷ್ಣನಾಯ್ಕನ ಪರವಾಗಿ ಕರವೇ ಕೃಷಿ ಇಲಾಖೆ ಮುಂದೆ ಪ್ರತಿಭಟನೆ ನಡೆಸಲಾಯಿತು.
ತಾ.ಕರವೇ ಅಧ್ಯಕ್ಷ ಎಲ್ಲಪ್ಪ ಮಾತನಾಡಿ, ಕಂಬಳಿ ಹುಳುವಿನ ನಿಯಂತ್ರಣಕ್ಕೆ ಪಟ್ಟಣದ ಮೆ.ನಟರಾಜ್ ಟ್ರೇಡರ್ಸ್‌ನಿಂದ ಮ್ಯಾಟಾಡೋರ್ ಔಷಧಿಯ ಜತೆಗೆ ಮಂಗಳ ಎನ್‌ಕೆಪಿ 19-19-19 ಗೊಬ್ಬರ ಹಾಗೂ ಮ್ಯಾಂಕೋಜೆಟ್ 75, ಪಿಟ್ಯುಬಲ್ ಪೌಡರ್ ಹೈಜೆಬ್ ಎಮ್ 45 ಖರೀದಿಸಿ ಫಸಲಿಗೆ ಸಿಂಪಡಿಸಿದ್ದಾರೆ. ಸಿಂಪಡಿಸಿದ ಕೇವಲ 2-3 ದಿನದಲ್ಲಿ ಸಂಪೂರ್ಣವಾಗಿ 1.2 ಎಕರೆ ಮೆಣಸಿನ ಗಿಡಗಳು ಸುಟ್ಟು ನಾಶವಾಗಿದೆ ಎಂದು ಹೇಳಿದರು. ಜಂಟಿ ಕೃಷಿ ನಿರ್ದೇಶಕ ಶಿವಮೂರ್ತಿರವರಿಗೆ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಸಲಾಯಿತು. ಈ ಸಂದರ್ಬದಲ್ಲಿ ವೇದಿಕೆಯ ನಗರಾಧ್ಯಕ್ಷ ಭಂಡಾರಿ ರವಿ, ಶಿವರಾಜ್, ನಾಗಾನಾಯ್ಕ, ಬದ್ಯಾನಾಯ್ಕ, ಪರಮೇಶ್ ನಾಯ್ಕ, ರಾಮಾನಾಯ್ಕ, ರಮೇಶ್ ನಾಯ್ಕ ಇದ್ದರು.