7ರಂದು ಡಯಾಬಿಟಿಕ್ ರೆಟಿನೋಪತಿ ಉಚಿತ ತಪಾಸಣೆ
ಕ.ಪ್ರ ವಾರ್ತೆ, ಶಿವಮೊಗ್ಗ, ಏ.4
ರೋಟರಿ ಸಭಾಂಗಣದಲ್ಲಿ ವಿಶ್ವ ಆರೋಗ್ಯ ದಿನದ ಅಂಗವಾಗಿ ಏಪ್ರಿಲ್ 7ರಂದು ಡಯಾಬಿಟಿಕ್ ರೆಟಿನೋಪತಿ ಉಚಿತ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿದೆ. ಡಾ. ಬಾಲಚಂದ್ರ ತೆಗ್ಗಿಹಳ್ಳಿಯವರು ಮಧುಮೇಹಿಗಳಿಗೆ ರೆಟಿನೋಪತಿ ತಪಾಸಣಾ ಕಾರ್ಯ ನಡೆಸಿಕೊಡುವರು.
ಸಾಮಾನ್ಯವಾಗಿ ಮಧು ಮೇಹಿಗಳ ಕಣ್ಣಿನ ರಕ್ತನಾಳಗಳಲ್ಲಿ ರಕ್ತಸ್ರಾವ, ರಕ್ತ ಸೋರುವಿಕೆ, ಕಣ್ಣಿನ ದೃಷ್ಟಿ ಮಂದವಾಗುವುದು ಸೇರಿದಂತೆ ವಿವಿಧ ರೀತಿಯ ತೊಂದರೆಗಳು ಅರಿವಿಲ್ಲದೆ ಉಂಟಾಗುತ್ತದೆ. ಸೂಕ್ತ ಸಮಯದಲ್ಲಿ ತಪಾಸಣೆಗೊಳಪಟ್ಟು ಚಿಕಿತ್ಸೆ ಪಡೆಯದಿದ್ದರೆ ಶಾಶ್ವತ ಕಣ್ಣಿನ ದೃಷ್ಟಿ ದೋಷ ಉಂಟಾಗಬಹುದು. ಹೀಗಾಗಿ ಮಧುಮೇಹಿಗಳು ಈ ಶಿಬಿರದ ಉಪಯೋಗಪಡೆಯುವಂತೆ ರೋಟರಿ ಕ್ಲಬ್ ಅಧ್ಯಕ್ಷ ನರೇಶ್ ಜೈನ್ ಕೋರಿದ್ದಾರೆ. ಸಂಪರ್ಕ ಸಂಖ್ಯೆ 9449738953