ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

7ರಂದು ರಾಗರಿಂಗಣ

Lingaraj Badiger
Updated On : 5 Apr 2013, 10:33 am

ಸಾಗರ: ಇಲ್ಲಿನ ವೇದನಾದ ಪ್ರತಿಷ್ಠಾನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಏ.7ರಂದು ಬೆಳಗ್ಗೆ 9 ಗಂಟೆಯಿಂದ ಪಟ್ಟಣದ ಗಾಂಧಿ ಮಂದಿರದಲ್ಲಿ ಜಿಲ್ಲಾ ಯುವ ಸಂಗೀತೋತ್ಸವ-2013ರ ಅಂಗವಾಗಿ ರಾಗರಿಂಗಣ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಯುವ ಸಂಗೀತೋತ್ಸವವನ್ನು ಬೆಳಗ್ಗೆ 9ಕ್ಕೆ ದಾನಿ ಎ.ಎನ್. ವೆಂಕಟಕೃಷ್ಣ ಉದ್ಘಾಟಿಸಲಿದ್ದು, ವೆಂಕಟೇಶ ಹೆಗಡೆ ಹುಲಿಮನೆ ಅಧ್ಯಕ್ಷತೆ ವಹಿಸಲಿದ್ದಾರೆ. ನಂತರ ನಡೆಯುವ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ಸದ್ಗುರು ಹಿಂದೂಸ್ಥಾನಿ ಶಾಸ್ತ್ರೀಯ ಸಂಗೀತ ಶಾಲೆಯವರಿಂದ ಸುಗಮ ಸಂಗೀತ, ಹೊಸನಗರದ ವಂದನಾ ಭಾಸ್ಕರ್ ಮತ್ತು ತಂಡ, ತೀರ್ಥಹಳ್ಳಿಯ ವೈಷ್ಣವಿ ಕೇಕುಡಾ ಹಾಗೂ ಸ್ಮೃತಿ ಪಿ. ಸೊರಬದ ಶೃತಿ ಬಿ., ಸಾಗರದ ಭಾರ್ಗವ ಬೇದೂರು, ಭದ್ರಾವತಿಯ ಜಿ. ಮಂಜುನಾಥ್ ಅವರಿಂದ ಹಿಂದೂಸ್ಥಾನಿ ಶಾಸ್ತ್ರೀಯ ಗಾಯನ, ಶಿಕಾರಿಪುರದ ಚಿನ್ಮಯಿ ಸತೀಶ್, ಹಿರಣ್ಮಯಿ ಸತೀಶ್ ಅವರಿಂದ ಕರ್ನಾಟಕ ಸಂಗೀತ ಜುಗಲ್ ಬಂಧಿ, ಸೊರಬದ ಗಿರಿಧರ್ ದೊಡ್ಡೇರಿ ಅವರಿಂದ ಹಿಂದೂಸ್ಥಾನಿ ಬಾನ್ಸುರಿ ವಾದನ, ಸಾಗರದ ಸುರೇಂದ್ರನಾಥ್ ಮತ್ತು ಶೌರಿ ಶಾನಭೋಗ್ ಅವರಿಂದ ತಬಲ ಜುಗಲ್ ಬಂಧಿ, ಶಿವಮೊಗ್ಗದ ನಿಷಾಧ ಹರ್ಲಾಪುರ್, ನೌಷದ್ ಹರ್ಲಾಪುರ್ ಅವರಿಂದ ಹಿಂದೂಸ್ಥಾನಿ ಗಾಯನ ಜುಗಲ್ ಬಂಧಿ ನಡೆಯಲಿದೆ.
ಸಂಜೆ 5ಕ್ಕೆ ನಡೆಯುವ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವೇದನಾದ ಪ್ರತಿಷ್ಠಾನದ ಅಧ್ಯಕ್ಷ ವೆಂಕಟೇಶ್ ಹೆಗಡೆ ವಹಿಸಲಿದ್ದು, ವಿಜಯವಾಮನ್, ಗತರ್‌ಕೆರೆ ರಾಘಣ್ಣ, ರಾಜಾರಾಮ ಸೊರಬ, ಹುಮಾಯೂನ್ ಹರ್ಲಾಪುರ್ ಪಾಲ್ಗೊಳ್ಳುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement