ಈಶ್ವರಪ್ಪ ಅಭಿನಂದನಾ ಕಾರ್ಯಕ್ರಮ ರದ್ದು
ಶಿವಮೊಗ್ಗ: ಜಿಲ್ಲಾ ಬ್ರಾಹ್ಮಣ ಮಹಾಸಭಾ ಮತ್ತು ವಿವಿಧ ವಿಪ್ರ ಸಂಘಟನೆಗಳ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 5ರಂದು ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭ ರದ್ದಾಗಿದೆ. ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಸನ್ಮಾನಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಜೊತೆಗೆ ಸಂಗೀತ ಕುಲಕರ್ಣಿಯವರಿಂದ ಸಂಗೀತ ಸಂಜೆ ನಡೆಯಬೇಕಾಗಿತ್ತು.
ಆದರೆ, ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮ ರದ್ದಾಗಿದೆ ಎಂದು ಮಹಾಸಭಾ ಕಾರ್ಯದರ್ಶಿ ನಟರಾಜ ಭಾಗವತ್ ಅವರು ತಿಳಿಸಿದ್ದಾರೆ.