ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜಿಲ್ಲಾ ಸಾಹಿತ್ಯ ಸಮ್ಮೇಳನ ಅಧ್ಯಕ್ಷರಾಗಿ ಹುಚ್ಚಪ್ಪ ಮಾಸ್ತರ್ ಆಯ್ಕೆ

Lingaraj Badiger
Updated On : 5 Apr 2013, 10:45 am

ಕ.ಪ್ರ ವಾರ್ತೆ, ಶಿವಮೊಗ್ಗ, ಏ.4
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಜೂನ್ ತಿಂಗಳಲ್ಲಿ ಆಯೋಜಿಸಲಿರುವ ಎಂಟನೇ ಜಿಲ್ಲಾ ಕನ್ನಡ ಸಾಹಿತ್ಯ  ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಾನಪದ ಕ್ಷೇತ್ರದಲ್ಲಿ ಹೆಸರು ಮಾಡಿರುವ ಜಾನಪದ ವಿದ್ವಾಂಸ ಎನ್.  ಹುಚ್ಚಪ್ಪ ಮಾಸ್ತರ್ ಅವರನ್ನು ಸರ್ವಾನುಮತದಿಂದ ಆರಿಸಲಾಯಿತು.
ಜಿಲ್ಲಾ ಅಧ್ಯಕ್ಷ ಡಿ. ಮಂಜುನಾಥ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಈ ಹಿಂದೆ ನಿಗಧಿಯಾಗಿದ್ದಂತೆ ಏ.27 ಮತ್ತು 28ರಂದು ನಡೆಸಲು ಉದ್ದೇಶಿಸಿದ್ದ ಸಮ್ಮೇಳನವನ್ನು ವಿಧಾನ ಸಭೆ ಚುನಾವಣೆ ಹಿನ್ನಲೆಯಲ್ಲಿ ಜೂ.1 ಮತ್ತು 2ಕ್ಕೆ ಮುಂದೂಡಲು ಸಭೆ ತೀರ್ಮಾನಿಸಿತು.
ಈ ಹಿಂದೆ 2011ರಲ್ಲಿ ನಡೆದ ಏಳನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಜಯಾ  ರಾಜಶೇಖರ್, 2010ರಲ್ಲಿ ನಡೆದ 6ನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ನಾ. ಡಿಸೋಜ, 2009ರಲ್ಲಿ ಐದನೇ ಜಿಲ್ಲಾ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಡಾ.ಎಚ್.ಡಿ. ಚಂದ್ರಪ್ಪಗೌಡ ಆಯ್ಕೆಯಾಗಿದ್ದರು.
2002ರಲ್ಲಿ ನಾಲ್ಕನೇ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದವರು ಸಾಗರದ ಸಾಹಿತಿ ಟಿ. ಮಹಾಬಲೇಶ್ವರ ಭಟ್ಟ. ಸಮ್ಮೇಳನವು ಶಿವಮೊಗ್ಗದ ಕುವೆಂಪು ರಂಗಮಂದಿರದಲ್ಲಿ ನಡೆದಿತ್ತು. 1992ರಲ್ಲಿ 3ನೇ ಜಿಲ್ಲಾ ಕನ್ನಡ ಸಾಹಿತ್ಯ  ಸಮ್ಮೇಳನ ಶಿವಮೊಗ್ಗದ ಕರ್ನಾಟಕ ಸಂಘ ಆವರಣದಲ್ಲಿ ನಡೆದಿತ್ತು. ಡಾ.ಎಚ್. ತಿಪ್ಪೇರುದ್ರಸ್ವಾಮಿ ಸಮ್ಮೇಳನದ ಸರ್ವಾಧ್ಯಕ್ಷರಾಗಿದ್ದರು.
1980ರಲ್ಲಿ ಸಾಗರದಲ್ಲಿ ಎರಡನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿತ್ತು. ಪ್ರೊ.ಎಸ್.ವಿ. ಪರಮೇಶ್ವರ  ಭಟ್ಟರು ಸರ್ವಾಧ್ಯಕ್ಷರಾಗಿದ್ದರು. 1970ರಲ್ಲಿ ಹೊಸನಗರ ತಾಲೂಕು ಹೊಂಬುಜದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕೆ ಡಾ.ಜಿ.ಪಿ. ರಾಜರತ್ನಂ ಸರ್ವಾಧ್ಯಕ್ಷರಾಗಿದ್ದರು.
ಈ ಬಾರಿ ಜಿಲ್ಲಾ ನಮ್ಮೇಳನ ನಡೆಯುವ ಮುನ್ನ ಎಲ್ಲಾ ತಾಲೂಕುಗಳಲ್ಲಿ ಮೇ ತಿಂಗಳ ಅಂತ್ಯದೊಳಗೆ ತಾಲೂಕು ಸಮ್ಮೇಳನ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಬೇರೆ ಬೇರೆ ತಾಲೂಕುಗಳ ಅಧ್ಯಕ್ಷರು ಇದುವರೆಗೆ ಸಮ್ಮೇಳನ ನಡೆಸಲು ಮಾಡಿದ ಸಿದ್ದತೆ ಕುರಿತು ಸಭೆಗೆ ಮಾಹಿತಿ ನೀಡಿದರು.
ಜಲ್ಲಾ ಕಾರ್ಯದರ್ಶಿ ಎಸ್. ಶಿವಮೂರ್ತಿ ಸ್ವಾಗತಿಸಿ, ಎಂ. ನವೀನ್‌ಕುಮಾರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement