ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಫ್ರಾನ್ಸಿಸ್ ಡಿಸೋಜರ ಸ್ಪೀಕಿಂಗ್ ಇಂಗ್ಲಿಷ್ ಪುಸ್ತಕ ಬಿಡುಗಡೆ

Lingaraj Badiger
Updated On : 5 Apr 2013, 10:36 am

ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾಲಯದ ಇಂಗ್ಲಿಷ್ ವಿಭಾಗದ ಸಂಶೋಧಕ ಫ್ರಾನ್ಸಿಸ್ ಡಿಸೋಜ ಅವರು ಬರೆದಿರುವ ಸ್ಪೀಕಿಂಗ್ ಇಂಗ್ಲಿಷ್ ಎಂಬ ಪುಸ್ತಕ ಬಿಡುಗಡೆಗೊಂಡಿದೆ.
ನಗರದ ಎಡ್ಯುರೈಟ್ ಕಾಲೇಜ್ ಆಫ್ ಮ್ಯಾನೇಜ್‌ಮೆಂಟ್ ಸಭಾಂಗಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಅತಿಥಿ ಉಪನ್ಯಾಸಕ ಪ್ರೊ. ಡೇವಿಡ್ ಬಾಂಡ್ ಪುಸ್ತಕ ಬಿಡುಗಡೆಗೊಳಿಸಿದರು.
ನಂತರ ಕಾರ್ಯಕ್ರಮ ಉದ್ಧೇಶಿಸಿ ಮಾತನಾಡಿದ ಅವರು, ಈ ಪುಸ್ತಕದಲ್ಲಿ ಪರಿಚಯಿಸಿರುವ ಇಂಗ್ಲಿಷ್ ಆಲಿಸುವಿಕೆ ಮತ್ತು ಬರವಣಿಗೆಯ ವಿಚಾರಗಳು, ವ್ಯಾಕರಣ, ಇಂಗ್ಲಿಷ್ ಕಲಿಕಾ ವಿದ್ಯಾರ್ಥಿಗಳಿಗೆ ತುಂಬ ಉಪಯುಕ್ತವಾಗಿದೆ ಎಂದರು. ಲೇಖಕ ಫ್ರಾನ್ಸಿಸ್ ಡಿಸೋಜ ಮಾತನಾಡಿದರು. ಕಾರ್ಯಕ್ರಮದಲ್ಲಿ ಬೆಂಗಳೂರಿನ ಕ್ಯಾನನ್ ಲಾ, ಅತಿಥಿ ಉಪನ್ಯಾಸಕ ಫಾ. ಆಲ್ವಿನ್ ಸೆರಾಮೊ, ಪ್ರೊ. ರಾಮಪ್ರಸಾದ, ಡಾ. ಶಂಕರನಾರಾಯಣ್, ರೇಷ್ಮಾ ಡಿಸೋಜ, ಪಲ್ಲವಿ, ಕುಶಲ್, ದೀಕ್ಷಾ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement