ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ವಿಜೃಂಭಣೆಯ ಮಹಾಂಕಾಳಿ ರಥೋತ್ಸವ

Lingaraj Badiger
Updated On : 5 Apr 2013, 10:45 am

ಕ.ಪ್ರ ವಾರ್ತೆ, ಸೊರಬ, ಏ.4
ತಾಲೂಕಿನ ಹೆಚ್ಚೆ, ಹುಲ್ತಿಕೊಪ್ಪ ಗ್ರಾಮಗಳಲ್ಲಿ ಗುರುವಾರ ಬೆಳಗ್ಗೆ ಬನ್ನಿ ಮಹಾಂಕಾಳಿ ಅಮ್ಮನವರ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಏ.2ರಿಂದ ಆರಂಭಗೊಂಡ ರಥೋತ್ಸವದಲ್ಲಿ ಅಂಕುರಾರೋಹಣ, ಧ್ವಜಾರೋಹಣ, ಭೇರಿ ಘೋಷಣಾ, ಕೌತುಕ ಬಂಧನ, ಯಾಗಶಾಲಾ ಪ್ರವೇಶ, ಮಹಬಲಿ, ಸಿಂಹ ಯಂತ್ರೋತ್ಸವ, ಜಪ ಹವನ, ವೃಷಭ ಯಂತ್ರೋತ್ಸವ, ಪುಷ್ಪಮಂಜರಿ ಯಂತ್ರೋತ್ಸವ, ಮಹಾರಥೋತ್ಸವ, ಅವಭೃತ ಸ್ನಾನ, ತುಲಾಭಾರ, ಬೇವಿನುಡಿಗೆ ಮುಂತಾದ ಹರಕೆ ವಗೈರಿಗಳು ನಡೆದವು.
ಹೆಚ್ಚೆಯಲ್ಲಿ ನಡೆದ ಜಾತ್ರೆಯಲ್ಲಿ ಗ್ರಾಪಂ ಅಧ್ಯಕ್ಷ ಜಯಶೀಲಗೌಡ ಅಂಕರವಳ್ಳಿ, ಗ್ರಾಮ ಸಮಿತಿ ಅಧ್ಯಕ್ಷ ಸಂಪತ್‌ಕುಮಾರ್ ಜೋಯ್ ಮಹಾ ರಥೋತ್ಸವಕ್ಕೆ ಚಾಲನೆ ನೀಡಿದರು.
ಹೆಚ್ಚೆ ಗ್ರಾಮಸ್ಥರೂ ಸೇರಿದಂತೆ, ಒಕ್ಕಲಕೊಪ್ಪ, ಹೊಸಕೊಪ್ಪ, ಕಾರೆಹೊಂಡ ಗ್ರಾಮಗಳ ಮುಖಂಡರು, ಗ್ರಾಮಸ್ಥರು ಮೊದಲಾದವರು ಪಾಲ್ಗೊಂಡರು.
ಜಾತ್ರೆಯ ಅಂಗವಾಗಿ ಸ್ಥಳೀಯ ಮಾರುತಿ ಅಂಬೇಡ್ಕರ್ ಕಲಾ ನಾಟ್ಯ ಸಂಘ, ಕಾಳಿಕಾಂಬ ಯುವಕ ಸಂಘದ ಕಲಾವಿದರಿಂದ ಸಂಗೀತ ನಾಟಕ, ರಸಮಂಜರಿ ಕಾರ್ಯಕ್ರಮ, ಭಜನೆ ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement