ಸಾಗರ: ನೀರಿನ ಪರಿಷ್ಕೃತ ದರ ಜಾರಿ
ಸಾಗರ: ಇಲ್ಲಿನ ನಗರಸಭೆ ವ್ಯಾಪ್ತಿಯಲ್ಲಿ ಬರುವ ಕುಡಿಯುವ ನೀರಿನ ನಲ್ಲಿ ಸಂಪರ್ಕ ಹೊಂದಿರುವವರಿಗೆ ಸರ್ಕಾರದ ಆದೇಶದಂತೆ ಏಪ್ರಿಲ್-2013ರಿಂದ ಪರಿಷ್ಕೃತ ದರವನ್ನು ಜಾರಿಗೆ ತರಲಾಗಿದೆ. ಗೃಹ ಬಳಕೆ ದರ 120, ವಾಣಿಜ್ಯ ಹಾಗೂ ಕೈಗಾರಿಕೆ ಬಳಕೆಗೆ 480, ಗೃಹೇತರ ಬಳಕೆಗೆ 240 ನಿಗದಿಪಡಿಸಲಾಗಿದೆ.
ಈಗಾಗಲೇ ಕುಡಿಯುವ ನೀರಿನ ಕೊಳಾಯಿ ಸಂಪರ್ಕ ಹೊಂದಿರುವ ಬಳಕೆದಾರರು ಸರ್ಕಾರದ ಆದೇಶದಂತೆ ಐಎಸ್‌ಐ ಗುರುತಿನ ವಾಟರ್ ಮೀಟರ್‌ಗಳನ್ನು ತಮ್ಮ ಸ್ವಂತ ಖರ್ಚಿನಲ್ಲಿ ಅಳವಡಿಸಿಕೊಂಡು ನಗರಸಭೆಗೆ ವರದಿ ನೀಡತಕ್ಕದ್ದು. ಮೀಟರ್ ಅಳವಡಿಕೆ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಲ್ಲಿ ಸರ್ಕಾರದ ಆದೇಶದಂತೆ ಕನಿಷ್ಠ ದರಗಳ ಮೇಲೆ ಶೇ. 25ರಷ್ಟು ಮೊತ್ತವನ್ನು ನೋಟಿಸ್ ನೀಡಿ ಆರು ತಿಂಗಳ ನಂತರ ವಿಧಿಸಲಾಗುವುದು. ಶೇ. 50ರಷ್ಟು ಮೊತ್ತವನ್ನು ಒಂದು ವರ್ಷದ ನಂತರ ಹೆಚ್ಚುವರಿಯಾಗಿ ವಿಧಿಸಲಾಗುವುದು ಎಂದು ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.