ನಮ್ಮ ಆರೋಗ್ಯ ನಮ್ಮ ಕೈಲಿ: ಉಪನ್ಯಾಸ
ಶಿವಮೊಗ್ಗ: ಜಿಲ್ಲಾಡಳಿತ, ಜಿಪಂ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರ ಹಾಗೂ ಕಣಾದ ಯೋಗ ಮತ್ತು ಸಂಶೋಧನಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಏಪ್ರಿಲ್ 7ರಂದು ಸಂಜೆ 4.30ರಿಂದ 6.30ರವರೆಗೆ ನೆಹರು ಕ್ರೀಡಾಂಗಣದ ಯೋಗವುಂದಿರದಲ್ಲಿ ಡಾ.ಎನ್.ಎಲ್. ನಾಯಕ್‌ರವರಿಂದ ನಮ್ಮ ಆರೋಗ್ಯ ನಮ್ಮ ಕೈಲಿ ಎಂಬ ಉಪನ್ಯಾಸ ಮಾಲಿಕೆಯನ್ನು ಏರ್ಪಡಿಸಿದೆ.
ಈ ಕಾರ್ಯಕ್ರಮದ ಅತಿಥಿಯಾಗಿ ವಾರ್ತಾಧಿಕಾರಿ ಹಿಮಂತರಾಜು ಜಿ. ಹಾಗೂ ಅಧ್ಯಕ್ಷತೆಯನ್ನು ಕಣಾದ ಯೋಗ ಫೌಂಡೇಷನ್‌ನ ಬೆಲಗೂರು ಮಂಜುನಾಥ್ ವಹಿಸುವರು. ಆಸಕ್ತರು ಕಾರ್ಯಕ್ರಮಕ್ಕೆ ಜಮಖಾನ ಸಹಿತ ಆಗಮಿಸುವಂತೆ ಕೋರಿದೆ. ಮಾಹಿತಿಗಾಗಿ ಅನಿಲ್‌ಕುಮಾರ್ ಮೊ-9886674375 ಅವರನ್ನು ಸಂಪರ್ಕಿಸಲು ಕೋರಿದೆ.
ಏ. 10ರಿಂದ ಮೇ 31ರವರೆಗೆ ಪ್ರತಿದಿನ ಬೆಳಿಗ್ಗೆ 7.30ರಿಂದ 8.30 ಮತ್ತು ಸಂಜೆ 5.30ರಿಂದ 6.30ರವರೆಗೆ ನೆಹರು ಕ್ರೀಡಾಂಗಣದ ಯೋಗವುಂದಿರದಲ್ಲಿಆಯೋಜಿಸಲಾಗಿದೆ.