ನೆರವು: ರೋಟರಿ ಸಂಸ್ಥೆಯ ಧ್ಯೇಯ
ಕ.ಪ್ರ. ವಾರ್ತೆ, ಶಿವಮೊಗ್ಗ, ಏ.5
ಕಷ್ಟದಲ್ಲಿರುವವರಿಗೆ ನೆರವು ನೀಡುವುದೇ ರೋಟರಿ ಸಂಸ್ಥೆಯ ಉದ್ದೇಶ ಎಂದು ರೋಟರಿ ಉತ್ತರ ಘಟಕದ ಅಧ್ಯಕ್ಷ ಎನ್. ಮಂಜುನಾಥ್ ಹೇಳಿದ್ದಾರೆ.
ರೋಟರಿ ಉತ್ತರ ಹಾಗೂ ಇನ್ನರ್‌ವೀಲ್ ಕ್ಲಬ್‌ವತಿಯಿಂದ ಗರ್ಭಕೋಶದ ಕ್ಯಾನ್ಸರ್‌ನಿಂದ ಬಳಲುತ್ತಿರುವ, ಬಡತನದಲ್ಲಿರುವ ಬೊಮ್ಮನಕಟ್ಟೆಯ ಗಿರಿಜಮ್ಮನವರಿಗೆ ಆರ್ಥಿಕ ನೆರವು ನೀಡಿ ಮಾತನಾಡಿದರು.
ನಮ್ಮ ಕೈಲಾದ ಮಟ್ಟಿಗೆ ಸಮಾಜದ ಜೊತೆಗೆ ಸೇವೆ ಮಾಡುವುದರ ಮುಖಾಂತರ ಸಾರ್ಥಕತೆ ಕಂಡುಕೊಳ್ಳಬೇಕೆಂದು ಅವರು ಕರೆ ನೀಡಿದರು.
ನಾವು ಮಾಡಿದ ಸೇವೆಗೆ ನಾವು ಇರುವಾಗಲೇ ಫಲ ಸಿಗುತ್ತದೆ. ಹಾಗಿದ್ದಾಗ, ನಾವು ಕೈಲಾದ ಮಟ್ಟಿಗೆ ತುಂಬಾ ಅಗತ್ಯವಿರುವರಿಗೆ ದಾನ ಮಾಡಿವುದರಲ್ಲಿ ತಪ್ಪೇನಿಲ್ಲ. ಆದ್ದರಿಂದ, ಇಂತಹ ಆರ್ಥಿಕವಾಗಿ ಹಿಂದುಳಿದ ರೋಗಿಗಳಿಗೆ ಸಂಘ ಸಂಸ್ಥೆಗಳ ನೆರವು ನೀಡಿದಲ್ಲಿ ಜೀವನದ ಸಾರ್ಥಕತೆ ಕಂಡುಕೊಳ್ಳಬಹುದು ಎಂದು ತಿಳಿಸಿದರು.