ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಜೋಗ ಜಲಪಾತ ಹತ್ತಲು ಹೋಗಿ ಬಿದ್ದ 'ಕೋತಿರಾಮ'

Mainashree
Updated On : 6 Apr 2013, 11:26 am

ಕ.ಪ್ರ.ವಾರ್ತೆ  ಜೋಗ್‌ಫಾಲ್ಸ್  ಏ.6
962 ಅಡಿ ಎತ್ತರದ ಜೋಗ ಜಲಪಾತ ಏರಲು ಹೋಗಿ ಚಿತ್ರದುರ್ಗದ ಕೋತಿರಾಮ ಖ್ಯಾತಿಯ ಜ್ಯೋತಿರಾಜ್ ಬಿದ್ದು ಬೆನ್ನು ಹಾಗೂ ತಲೆಗೆ ಪೆಟ್ಟಾದ ಘಟನೆ ನಡೆದಿದೆ. ಶನಿವಾರ ಬೆಳಗ್ಗೆ ಜಲಪಾತ ಹತ್ತಲು ಶುರ ಮಾಡಿದ ಜ್ಯೋತಿರಾಜ್ 500 ಅಡಿ ಏರುತ್ತಿದ್ದಂತೆ ಆಶ್ರಯಕ್ಕಾಗಿ ಹಿಡಿದಿದ್ದ ಸಣ್ಣ ಬಂಡೆಯೊಂದು ಮೈಮೇಲೆ ಜಾರಿದ ಪರಿಣಾಮ ಕೆಳಗೆ ಬಿದ್ದಿದ್ದರಿಂದ ಬೆನ್ನು ಹಾಗೂ ತಲೆಗೆ ಸಣ್ಣ ಪ್ರಮಾಣದ ಗಾಯಗಳಾಗಿವೆ. ಇಷ್ಟೆಲ್ಲ ಆದರೂ ಛಲ ಬಿಡದೆ ಮೂರುವರೆ ಗಂಟೆಗಳಲ್ಲಿ ಜಲಪಾತ ಏರಿ ಸಾಹಸ ಮೆರೆದಿದ್ದಾನೆ. ಬಳಿಕ ಕಾರ್ಗಲ್ ಸರ್ಕಾರಿ ಪ್ರಾಥಮಿಕ ಕೇಂದ್ರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿದ ನಂತರ ತಲೆಗೆ ಹೆಚ್ಚಿನ ಪೆಟ್ಟಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗಕ್ಕೆ ಕರೆದೊಯ್ಯಲಾಗಿದೆ.  ಇದೇ ವೇಳೆ ಯಾವುದೇ ಮುನ್ಸೂಚನೆ ನೀಡದೆ ಮತ್ತು ಸುರಕ್ಷತಾ ಸಾಧನಗಳನ್ನು ಬಳಸದೆ ಜಲಪಾತ ಏರುವ ಹುಚ್ಚು ಸಾಹಸಕ್ಕೆ ಕೈ ಹಾಕಿದ್ದರಿಂದ ಜೋಗ್ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ನೋಟಿಸ್ ಜಾರಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement