18ರಿಂದ ಮಾಹಿತಿ ಆಂದೋಲನ
ಕ.ಪ್ರ ವಾರ್ತೆ, ಶಿವಮೊಗ್ಗ, ಏ.7
ಹಿಂದುಸೇವಾ ಪ್ರತಿಷ್ಠಾನ ಸೇವಾ ಶಿಕ್ಷಣ ಶಿಬಿರದ ಮಾಹಿತಿ ಆಂದೋಲನ ಹಮ್ಮಿಕೊಂಡಿದೆ. ಮಂಗಳೂರಿನ ಡೊಂಗರಕೇರಿ ಕೆನರಾ ಇಂಗ್ಲಿಷ್ ಪ್ರಾಥಮಿಕ ಶಾಲೆಯಲ್ಲಿ 18ರಿಂದ ಮೇ 5ರವರೆಗೆ ಶಿಬಿರ ಏರ್ಪಡಿಸಲಾಗಿದೆ.
ಆಂದೋಲನದಲ್ಲಿ 18ವರ್ಷ ಮೇಲ್ಪಟ್ಟ 50ವರ್ಷದ ಒಳಪಟ್ಟ ಯುವತಿ, ಮಹಿಳೆಯರು, ಸೇವಾ ಚಟುವಟಿಕೆಯನ್ನು ಮಾಡಲು ಇಚ್ಚೆಯುಳ್ಳವರು, ಸ್ವಯಂಸೇವಾ ಸಂಸ್ಥೆಯ ಪದಾಧಿಕಾರಿಗಳು, ಸಿಬ್ಬಂದಿ, ಶಾಲಾ ಶಿಕ್ಷಕರು ಪಾಲ್ಗೊಳ್ಳಲು ಅವಕಾಶವಿದೆ.
ಸೇವಾ ಶಿಕ್ಷಣ ಶಿಬಿರದಲ್ಲಿ ಪಾಲ್ಗೊಂಡವರಿಗೆ ಮಾನಸಿಕತೆ ಹಾಗೂ ಜವಾಬ್ದಾರಿಯ ಅರಿವು ಮೂಡಿಬರುತ್ತದೆ.
ವ್ಯಕ್ತಿತ್ವ ವಿಕಾಸ, ಧ್ಯಾನ, ಯೋಗ, ಮನೆಮದ್ದು, ಕರಕುಶಲ ಕೌಶಲ್ಯ ಶೈಕ್ಷಣಿಕ, ಸಾಂಸ್ಕೃತಿಕ, ಜಲರಕ್ಷಣೆ, ಪರಿಸರ ಆರೋಗ್ಯಗಳ ಬಗ್ಗೆ ಅನುಭವಿ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ನೀಡಲಾಗುವುದು.
ಆಸಕ್ತ ಅಭ್ಯರ್ಥಿಗಳು 500 ರುಪಾಯಿ ಶುಲ್ಕ ಪಾವತಿ ಮಾಡಿ ಶಿಬಿರದಲ್ಲಿ ಪಾಲ್ಗೊಳ್ಳಬಹುದು ಎಂದು ಪ್ರತಿಷ್ಠಾನದ ಸಂಯೋಜಕ ಎ. ಮೈಲಾರಿ ತಿಳಿಸಿದ್ದಾರೆ. ವಿವರಗಳಿಗಾಗಿ- 9480316629.