ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಎಸ್‌ವೈ ಸೋಲಿಸಲು ನಾನೇ ಸರಿಯಾದ ವ್ಯಕ್ತಿ: ಶಾಂತವೀರಪ್ಪ ಗೌಡ

Lingaraj Badiger
Updated On : 8 Apr 2013, 11:38 am

ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ನಾನು ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದವರು, ಹಾಗಾಗಿ ನನಗೆ ಈ ಬಾರಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಅವಕಾಶ ಸಿಕ್ಕಿದೆ ಎಂದು ಶಿಕಾರಿಪುರ ಕಾಂಗ್ರೆಸ್ ಅಭ್ಯರ್ಥಿ ಶಾಂತವೀರಪ್ಪ ಗೌಡ ಹೇಳಿದ್ದಾರೆ.
ಶಿಕಾರಿಪುರ ಕಾಂಗ್ರೆಸ್‌ನಲ್ಲಿ ಬಂಡಾಯ ಎದ್ದಿರುವ ಹಿನ್ನೆಲೆಯಲ್ಲಿ ಕನ್ನಡಪ್ರಭ ಅವರನ್ನು ಮಾತನಾಡಿಸಿದಾಗ, ತಮಗೆ ಟಿಕೆಟ್ ಸಿಕ್ಕಿರುವುದನ್ನು ಅವರು ಸಮರ್ಥಿಸಿಕೊಂಡರು. ಮೊದಲು ತಾಲೂಕಿನಿಂದ 13 ಆಕಾಂಕ್ಷಿಗಳ ಪಟ್ಟಿ ಇತ್ತು. ನಂತರ ಕೆಪಿಸಿಸಿ, ಎಐಸಿಸಿ ಎರಡು ಹೆಸರನ್ನು ಅಂತಿಮಗೊಳಿಸಿತು. ಕೊನೆಯಲ್ಲಿ ನನ್ನ ಹೆಸರನ್ನು ಅಂತಿಮಗೊಳಿಸಿ ಅಭ್ಯರ್ಥಿ ಎಂದು ಘೋಷಿಸಿದೆ. ನನ್ನ ಹೆಸರನ್ನು ಘೋಷಿಸಲು ಕಾರಣವೂ ಇದೆ ನಾನು ಬಿಜೆಪಿಯಲ್ಲಿ ಇದ್ದು, ಯಡಿಯೂರಪ್ಪನವರ ಸಂಗಾತಿಯಾಗಿ ಬಿಜೆಪಿ ಹಾಗೂ ಯಡಿಯೂರಪ್ಪನವರ ಎಲ್ಲ ಹಿಡತ-ಹೊಡೆತ ಬಲ್ಲವನಾಗಿದ್ದೇನೆ. ಯಡಿಯೂರಪ್ಪನವರನ್ನು ಸೋಲಿಸಲು ನಾನೇ ಸೂಕ್ತ ವ್ಯಕ್ತಿ ಎಂದು ಪಕ್ಷದ ಮುಖಂಡರು ತೀರ್ಮಾನಿಸಿದ್ದಾರೆ ಎಂದರು.
ಶಿಕಾರಿಪುರದಲ್ಲಿ ಯಡಿಯೂರಪ್ಪನವರು ಅಂದುಕೊಂಡ ರೀತಿ ಲಿಂಗಾಯತರು ಅವರ ಹಿಂದೆ ಇಲ್ಲ. ಹಾಗೆಯೇ ನಾನು ಎಲ್ಲ ಜನಾಂಗದವರನ್ನು ವಿಶ್ವಾಸಕ್ಕೆ ಪಡೆದು ಮತಯಾಚಿಸುತ್ತೇನೆ. ಹಿಂದೆ ಮಹಲಿಂಗಪ್ಪನವರು ಚುನಾವಣೆಗೆ ಸ್ಪರ್ಧಿಸಿದಾಗಲೂ ಲಿಂಗಾಯತರಲ್ಲದೆ ಇತರರು ಒಟ್ಟಾಗಿ ಅವರನ್ನು ಬೆಂಬಲಿಸಿದ್ದ ಕಾರಣ ಗೆದ್ದರು ಎಂದರು. ಬಿಜೆಪಿ ಒಂದು ರಾಷ್ಟ್ರೀಯ ಪಕ್ಷ, ಆದರೂ ಅದರ ಅನೇಕ ಕಾರ್ಯಕರ್ತರು ನನ್ನನ್ನು ಬೆಂಬಲಿಸಲಿದ್ದಾರೆ.  ಆ ಪಕ್ಷದ ಪ್ರಮುಖರಿಂದಲೂ ಎಲ್ಲ ಸಹಕಾರ ಸಿಗುವುದೆಂಬ ನಂಬಿಕೆ ಇದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement