ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮನೆ ಮುಂದೆ ನಿಲ್ಲಿಸಿದ್ದ ಆಟೋಗೆ ಬೆಂಕಿ

Lingaraj Badiger
Updated On : 8 Apr 2013, 11:38 am

ಶಿವಮೊಗ್ಗ: ರಾತ್ರಿ ವೇಳೆ ಮನೆ ಮುಂದೆ ನಿಲ್ಲಿಸಿದ್ದ ಆಟೋಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ ಘಟನೆ ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಸೈಪುಲ್ಲಾ ಎಂಬುವರಿಗೆ ಈ ಆಟೋ ಸೇರಿದ್ದು, ಇವರು ಎಂದಿನಂತೆ ತಮ್ಮ ಮನೆಯ ಬಳಿಯಿರುವ ಓಣಿಯಲ್ಲಿ ಆಟೋ ನಿಲ್ಲಿಸಿದ್ದ ವೇಳೆ ಕಿಡಿಗೇಡಿಗಳು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಆಟೋ ಬೆಂಕಿಗೆ ಆಹುತಿಯಾಗುತ್ತಿದ್ದುದನ್ನು ಗಮನಿಸಿದ ನೆರೆಹೊರೆಯವರು ಸೈಪುಲ್ಲಾಗೆ ವಿಷಯ ತಿಳಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ದೊಡ್ಡಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಅನಾಮಧೇಯ ಶವ ಪತ್ತೆ
ಇಲ್ಲಿನ ಹಳೆಯ ರೈಲ್ವೆ ನಿಲ್ದಾಣದ ಫ್ಲಾಟ್‌ಫಾರಂ ಸಮೀಪ ಅನಾಮಧೇಯ ಪುರುಷ ಶವ ಪತ್ತೆಯಾಗಿದೆ. 5.6 ಅಡಿ ಎತ್ತರ, ಗೋಧಿ ಮೈ ಬಣ್ಣ, ಅಗಲ ಮುಖ, ಉದ್ದ ಮೂಗು, ಬೋಡು ತಲೆ, ಸಾಧಾರಣ ಮೈಕಟ್ಟು ಇರುವ ವ್ಯಕ್ತಿ. ಹಸಿರು ಬಣ್ಣದ ಪಟಾಪಟಿ ಟೀ ಶರ್ಟ್, ನೀಲಿ ಬಣ್ಣದ ಚೌಕಳಿ ಲುಂಗಿ, ನೀಲಿ ಬಣ್ಣದ ಚಡ್ಡಿ, ಕಾಫಿ ಬಣ್ಣದ ಟೋಪಿ, ಬಲಗೈಯಲ್ಲಿ ಕಪ್ಪು ಬಳಿ ದಾರ ಕಟ್ಟಿದ್ದು, ಎರಡು ಬೆರಳುಗಳಲ್ಲಿ ತಾಮ್ರದ ಉಂಗುರವಿದೆ.  ಪ್ರಕರಣ ದಾಖಲಾಗಿದೆ.
ಜೂಜು: ಬಂಧನ
ಓಸಿ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿ ಒಬ್ಬನನ್ನು ಬಂಧಿಸಿದ್ದು, ಮತ್ತೊಬ್ಬ ಪರಾರಿಯಾದ ಘಟನೆ ವಿನೋಬನಗರ 60 ಅಡಿ ರಸ್ತೆಯ ಪಾರ್ಕ್ ಬಳಿ ನಡೆದಿದೆ.
ಜಟ್‌ಪಟ್ ನಗರದ ನಿವಾಸಿ ಶಿವು (28) ಬಂಧಿತ ಆರೋಪಿ. ಗೋಪಿ (40) ಎಂಬಾತ ಪೊಲೀಸರನ್ನು ಕಂಡು ಸ್ಥಳದಿಂದ ಪರಾರಿಯಾಗಿದ್ದಾನೆ. ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement