ಚಿನ್ನದ ಪದಕ
ಶಿವಮೊಗ್ಗ: ನಗರದ ಕೆ. ಪ್ರಿಯಾಂಕ ಅವರು ರಾಯಚೂರು ಕೃಷಿ ವಿಶ್ವವಿದ್ಯಾನಿಲಯದ ಎಂಎಸ್ಸಿ (ಕೃಷಿ) ಅರ್ಥಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಮಾಜಿ ರಾಷ್ಟ್ರಪತಿ ಡಾ. ಎಪಿಜೆ ಅಬ್ದುಲ್ ಕಲಾಂ ಅವರು ಪದಕ ವಿತರಿಸಿದ್ದಾರೆ. ಇವರಿಗೆ ಕೋಟೆ ಠಾಣೆಯ ಪಿಎಸ್‌ಐ ಹಾಗೂ ಸಿಬ್ಬಂದಿ ಅಭಿನಂದಿಸಿದ್ದಾರೆ ಎಂದು ಅವರ ಪತಿ ವಿ. ತಿಮ್ಮಾಭೋವಿ ತಿಳಿಸಿದ್ದಾರೆ.
ಕಂಪ್ಯೂಟರ್ ತರಬೇತಿ
ಶಿವಮೊಗ್ಗ: ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ರಾಜ್ಯದ ಪರಿಶಿಷ್ಟ ವರ್ಗದ ನಿರುದ್ಯೋಗಿ ಯವಕ-ಯುವತಿಯರಿಗೆ ಕಿಯಾನಿಕ್ಸ್ ಐಟಿಇಎಸ್ ವಿಭಾಗ ಕಂಪ್ಯೂಟರ್ ತರಬೇತಿ ಯೋಜನೆಯಡಿ ರಿಯಾಯಿತಿ ದರದಲ್ಲಿ ತರಬೇತಿ ನೀಡಲು ಉದ್ದೇಶಿಸಿದೆ. ಆದ್ದರಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದ ಅಭ್ಯರ್ಥಿಗಳು ಒಂದನೆ ಬಾರಿಗೆ ತರಬೇತಿ ಪಡೆಯುವ ಅಭ್ಯರ್ಥಿಗಳಿಗೆ ನಿಗಮ ನಿಗದಿಪಡಿಸಿರುವ ಶುಲ್ಕದಲ್ಲಿ ಶೇ.50ರಷ್ಟು ರಿಯಾಯಿತಿ ದರದಲ್ಲಿ ಕಂಪ್ಯೂಟರ್ ತರಬೇತಿ ನೀಡಲಿದೆ. ಮಾಹಿತಿಗೆ- 08182-402234.
ಬಿರುಸಿನ ಪ್ರಚಾರ
ಸೊರಬ: ತಂದೆ ಬಂಗಾರಪ್ಪ ಅವರಂತೆ 30 ವರ್ಷಗಳ ರಾಜಕಾರಣ ಕಟ್ಟುವ ಸದುದ್ದೇಶ ಇರಿಸಿಕೊಂಡಿರುವ ನನಗೆ ಈ ಬಾರಿ ಆಶೀರ್ವದಿಸಿ, ಜನರ ಶಕ್ತಿಯನ್ನು ಸಮರ್ಪಕವಾಗಿ ಬಳಸುವ ಅವಕಾಶ ಮಾಡಿಕೊಡಿ ಎಂದು ಜೆಡಿಎಸ್ ಯುವ ರಾಜ್ಯಾಧ್ಯಕ್ಷ ಮಧು ಬಂಗರಪ್ಪ ಹೇಳಿದರು. ತಾಲೂಕಿನ ಬಹುತೇಕ ಎಲ್ಲಾ ಹಳ್ಳಿಗಳಲ್ಲಿ ಬಿರುಸಿನ ಪ್ರಚಾರ ಕೈಗೊಂಡಿರುವ ಅವರು ತಾಲೂಕಿನ ಎಣ್ಣೆಕೊಪ್ಪ, ಕಮನವಳ್ಳಿ ಗ್ರಾಮಗಳಲ್ಲಿನ ಚುನಾವಣಾ ಪ್ರಚಾರಸಭೆ ಉದ್ದೇಶಿಸಿ ಮಾತನಾಡಿದರು.ಇದೇ ವೇಳೆ ತಾಪಂ ಮಾಜಿ ಅಧ್ಯಕ್ಷ ರುದ್ರಪ್ಪ ಕಡ್ಲೇರ್, ಹೇಮಾವತಿ ಕಡ್ಲೇರಾ ಜೆಡಿಎಸ್ ಸೇರ್ಪಡೆಗೊಂಡರು.ಬಸವಣ್ಯಪ್ಪ ಅಧ್ಯಕ್ಷತೆ ವಹಿಸಿದ್ದರು. ರುದ್ರಗೌಡ, ತಾಪಂ ಸದಸ್ಯ ಜಯಶೀಲಪ್ಪ, ಪುಟ್ಟರಾಜಗೌಡ, ಗೀತಾಂಜಲಿ, ಚೌಟಿ ಚಂದ್ರಪ್ಪ, ಮಂಜುನಾಥ್ ಇದ್ದರು.