ಮೂಲಸೌಕರ್ಯ ಕೊರತೆ: ಚುನಾವಣಾ ಬಹಿಷ್ಕಾರ ಎಚ್ಚರಿಕೆ
ಕ.ಪ್ರ.ವಾರ್ತೆ,ಹೊಸನಗರ, ಏ.8
ತಾಲೂಕಿನ ಸೊನಲೆ ಗ್ರಾಪಂನ ಹಲವು ಗ್ರಾಮಗಳಿಗೆ ಮೂಲಸೌಕರ್ಯದ ಕೊರತೆ ತಾಂಡವವಾಡುತ್ತಿರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಗ್ರಾಮಸ್ಥರು ಚುನಾವಣೆ ಬಹಿಷ್ಕರಿಸುವುದಾಗಿ ಎಚ್ಚರಿಸಿದ್ದಾರೆ.
ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದ ಕಲ್ಲುವಿಡಿ ಅಬ್ಬಿಗಲ್ ಗ್ರಾಮಸ್ಥರು, ಗ್ರಾಮಕ್ಕೆ ತೆರಳಲು ಸೂಕ್ತ ರಸ್ತೆ ಸಂಪರ್ಕದ ಕೊರತೆ ಇದ್ದರು ಈ ವರೆಗೆ ಅಭಿವೃದ್ಧಿ ಸಾಧ್ಯವಾಗಿಲ್ಲ. ಹಲವು ಗ್ರಾಮಗಳು ರಸ್ತೆ ಸೌಲಭ್ಯದಿಂದ ವಂಚಿತವಾಗಿದೆ. ತೀರ್ಥಹಳ್ಳಿ ಸಂಪರ್ಕ ರಸ್ತೆಗೆ ಬಾರಿ ಮನವಿ ನೀಡಿದರು ಪ್ರಯೋಜನವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮತಕೇಂದ್ರ ಇಲ್ಲ: ಕಲ್ಲುವಿಡಿ ಅಬ್ಬಿಗಲ್ ಗ್ರಾಮದಲ್ಲಿದ್ದ ಮತಕೇಂದ್ರವನ್ನು ರದ್ದುಮಾಡಲಾಗಿದ್ದು, ಮತದಾನ ಮಾಡಬೇಕೆಂದರೆ 7 ಕಿ.ಮೀ ನಡೆದು ಹೋಗಬೇಕಾದ ಪರಿಸ್ಥಿತಿ ನಿರ್ಮಾಣಗೊಳ್ಳುತ್ತಿದೆ. ಅಭಿವೃದ್ಧಿಯ ಜೊತೆಗೆ ಮತಕೇಂದ್ರವನ್ನು ಕಿತ್ತುಕೊಂಡಿರುವ ಕ್ರಮವನ್ನು ಪ್ರತಿಭಟನಾಕಾರರು ತೀವ್ರವಾಗಿ ಖಂಡಿಸಿದರು.