ಆರ್ಟ್ ಎಕ್ಸೆಲ್ ತರಬೇತಿ ಶಿಬಿರ
ಶಿವಮೊಗ್ಗ: ದಿ ಆರ್ಟ್ ಆಫ್ ಲಿವಿಂಗ್ ಏ.15ರಿಂದ 21ರ ವರೆಗೆ ಬೆಳಗ್ಗೆ 10ರಿಂದ ಮಧ್ಯಾಹ್ನ 2ಗಂಟೆವರೆಗೆ ಮಲ್ಲೇಶ್ವರ ನಗರ( ಗುಂಡಪ್ಪ ಶೆಡ್) ಭಾರತೀಯ ಕುಟುಂಬ ಯೋಜನೆ ಸಂಘದ ಸಭಾಂಗಣದಲ್ಲಿ ಆರ್ಟ್ ಎಕ್ಸೆಲ್ ತರಬೇತಿ ಶಿಬಿರ ಏರ್ಪಡಿಸಿದೆ. 8ರಿಂದ 13 ವರ್ಷದ ಮಕ್ಕಳು ಪಾಲ್ಗೊಳ್ಳಬಹುದು. ಮಕ್ಕಳಲ್ಲಿ ಅರಿವು ಹಾಗೂ ಚುರುಕುತನ, ಆತ್ಮವಿಶ್ವಾಸ ಮತ್ತು ಆತ್ಮ ಗೌರವ, ಗ್ರಹಣ ಶಕ್ತಿಯ ಮಟ್ಟ, ಸಕಾರತ್ಮಕ ಭಾವನೆಗಳ ವೃದ್ಧಿ, ಜನಸಂಪರ್ಕ ಕೌಶಲ್ಯ, ವ್ಯವಹಾರ ಕೌಶಲ್ಯ, ಏಕಾಗ್ರತೆ ಮತ್ತು ಜ್ಞಾಪಕ ಶಕ್ತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಶಿಬಿರ ಆಯೋಜಿಸಲಾಗಿದೆ. ಪ್ರಾಣಾಯಾಮ, ಯೋಗಾಸನಗಳು, ಉಸಿರಾಟದ ಪ್ರಕ್ರಿಯೆಗಳನ್ನು ಶಿಬಿರದಲ್ಲಿ ಕಾಣಬಹುದು ಎಂದು ಸಂಸ್ಥೆ ತಿಳಿಸಿದೆ. ವಿವರಗಳಿಗಾಗಿ- 9964072793.