ಇಂದು ಪುರುಷೋತ್ತಮ ಸನ್ಮಾನ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಏ.9
ಗೋ ಸೇವೆ ಮೂಲಕ ಸಾವಯವ ಕೃಷಿಯಲ್ಲಿ ಸಾಧನೆ ಮಾಡಿದ ಮಧ್ಯಪ್ರದೇಶದ ಚಾಕ್ರೋದ್ ಗ್ರಾಮದ ಸರಯೂ ಮತ್ತು ಜಯರಾಮ್ ಪಾಟೀದಾರ್ ಕುಟುಂಬದವರಿಗೆ ಶೋಭಾಯಾತ್ರೆ ಮತ್ತು ಪುರುಷೋತ್ತಮ ಸನ್ಮಾನ ಕಾರ್ಯಕ್ರವನ್ನು ಬುಧವಾರ ಇಲ್ಲಿಯ ಟಿಎಪಿಸಿಎಂಎಸ್ನ ಸುವರ್ಣ ಸಹಕಾರ ಭವನದಲ್ಲಿ ಹಮ್ಮಿಕೊಂಡಿದೆ.
ಪುರಷೋತ್ತಮ ರಾವ್ ಕೃಷಿ ಸಂಶೋಧನಾ ಪ್ರತಿಷ್ಠಾನ 'ಕೃಷಿಋಷಿ' ಪುರುಷೋತ್ತಮರಾಯರ ಸವಿನೆನಪಿನಲ್ಲಿ ಕೃಷಿ ಪ್ರಯೋಗ ಪರಿವಾರ ಹಾಗೂ ಸಾವಯವ ಕೃಷಿ ಪರಿವಾರದ ಸಹಯೋಗದೊಡನೆ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹಾಗೂ ಆರ್ಎಸ್ಎಸ್ನ ಸಹಕಾರ್ಯವಾಹ ಸುರೇಶ್ಜಿ (ಭಯ್ಯಾಜಿ) ಜೋಶಿ ಪಾಲ್ಗೊಳ್ಳಲಿದ್ದಾರೆ. ಅದೇ ದಿನ ಸಂಜೆ 3.30ರಿಂದ 4.30ರವರೆಗೆ ಸನ್ಮಾನಿತರೊಂದಿಗೆ 'ಕೃಷಿ ನಿವಾಸ'ದಲ್ಲಿ ಸಂವಾದ ಕಾರ್ಯಕ್ರಮವೂನಡೆಯಲಿದೆ ಎಂದು ಆಯೋಜಕರ ಪ್ರಕಟಣೆ ತಿಳಿಸಿದೆ.