ನಿಧನ: ಶಂಕರಯ್ಯ
ಭದ್ರಾವತಿ: ಪಟ್ಟಣದ ವೀರಶೈವ ಸಮಾಜದ ಹಿರಿಯ ಮುಖಂಡ, ಬೇಬಿ ಶಾಮಿಯಾನ ಮಾಲೀಕ ಎಚ್. ಶಂಕರಯ್ಯ (71) ಮಂಗಳವಾರ ಬೆಳಗ್ಗೆ ನಿಧನರಾದರು. ಮೃತರು ಗೌರಮ್ಮ, ಪುತ್ರರಾದ ಎಸ್. ಚನ್ನೇಶ್ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶಂಕರಯ್ಯನವರ ನಿಧನಕ್ಕೆ ರಂಭಾಪುರಿ ಶಿವಾಚಾರ್ಯ ಶ್ರೀ, ಶಾಸಕ ಬಿ.ಕೆ. ಸಂಗಮೇಶ್ವರ, ತುಮಕೂರು ಶಾಸಕ ಸೊಗಡು ಶಿವಣ್ಣ, ಹಳೇನಗರ ವೀರಶೈವ ಸೇವಾಸಮಿತಿ, ಪೇಟೆಬೀದಿ ಯುವಕ ಸಂಘ, ತಾಲೂಕು ವೀರಶೈವ ಸಮಾಜದ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.