ರ್ಯಾಂಕ್ ವಿಜೇತರು
ಶಿವಮೊಗ್ಗ: ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ನಡೆಸಿದ ರಾಜ್ಯ ಮಟ್ಟದ ಎಂಟೆಕ್ ಪರೀಕ್ಷೆಗಳಲ್ಲಿ ನಗರದ ಜವಾಹರ್ ಲಾಲ್ ನೆಹರು ರಾಷ್ಟ್ರೀಯ ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದಾರೆ. ನೆಟ್ವರ್ಕಿಂಗ್ ಮತ್ತು ಇಂಟರ್ನೆಟ್ ಎಂಜಿನಿಯರಿಂಗ್ ವಿಭಾಗದಲ್ಲಿ ಕೆ. ಮಾನಸ ಪ್ರಥಮ ರ್ಯಾಂಕ್ ಹಾಗೂ ಚಿನ್ನದ ಪದಕ, ಎನ್.ಡಿ. ಗಗನ್ ದ್ವಿತೀಯ, ಬಿ. ಮಧು ತೃತೀಯ ರ್ಯಾಂಕ್ ಪಡೆದಿದ್ದಾರೆ. ಡಿಸೈನ್ ಎಂಜಿನಿಯರಿಂಗ್ ವಿಭಾಗದಲ್ಲಿ ಕಿಶನ್ ಕರುಂಬಯ್ಯ ಮೂರನೇ ರ್ಯಾಂಕ್, ಟ್ರಾನ್ಸ್ಪೋರ್ಟ್ಟೆಷನ್ ಎಂಜಿನಿಯರಿಂಗ್ ಆಂಡ್ ಮ್ಯಾನೇಜ್ಮೆಂಟ್ ವಿಭಾಗದಲ್ಲಿ ಮಹೇಶ್ವರಿ ಬಿಸ್ನಾಲ್ ದ್ವಿತೀಯ ರ್ಯಾಂಕ್ ಪಡೆದಿದ್ದಾರೆ. ಇವರಿಗೆ ಕಾಲೇಜು ಪ್ರಾಂಶುಪಾಲ ಶ್ರೀನಿವಾಸರಾವ್ ಕಂಟೆ, ವಿಭಾಗದ ಮುಖ್ಯಸ್ಥರು, ಬೋಧಕ, ವರ್ಗ ಅಭಿನಂದಿಸಿದ್ದಾರೆ.