ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಉಚಿತ ಆರೋಗ್ಯ ತಪಾಸಣಾ ಶಿಬಿರ

Vishwanath S
Updated On : 11 Apr 2013, 1:36 am

ಶಿವಮೊಗ್ಗ: ಜಿಲ್ಲೆಯ ಸಹಕಾರಿ ವಲಯ ಪ್ರಥಮ ಆಸ್ಪತ್ರೆ ಜಿಸಿಎಸ್ ಹೆಲ್ತ್‌ಕೇರ್, ಪದವೀಧರ ಸಹಕಾರ ಸಂಘದ ಸಹಯೋಗದಲ್ಲಿ ಬಂಟರ (ನಾಡವರ) ಸಂಘದ ಸದಸ್ಯರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ತಜ್ಞ ವೈದ್ಯರ ಸೇವೆಯನ್ನೊಳಗೊಂಡ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು 12ರಿಂದ 19ರವರೆಗೆ  ಜಿಸಿಎಸ್ ಹೆಲ್ತ್‌ಕೇರ್‌ನ ಲ್ಯಾಬೋರೇಟರಿಯಲ್ಲಿ ಹಮ್ಮಿಕೊಳ್ಳಲಾಗಿದೆ. ಪ್ರತಿದಿನ ಬೆಳಿಗ್ಗೆ 7ರಿಂದ 10ಗಂಟೆಯ ಒಳಗೆ ತಪಾಸಣೆ ನಡೆಸಲಾಗುವುದು. ಪರೀಕ್ಷಾರ್ಥಿಗಳು ನೀರಿನ ಹೊರತಾಗಿ ಬೇರೆ ಏನನ್ನೂ ಸೇವಿಸದೇ ಖಾಲಿ ಹೊಟ್ಟೆಯಲ್ಲಿ ಬಂದು ಪರೀಕ್ಷೆ ಮಾಡಿಸಿಕೊಳ್ಳಬಹುದು. ಲ್ಯಾಬೋರೇಟರಿಯ ವಿವಿಧ ಪರೀಕ್ಷೆಗಳಿಗೆ ಬರುವ ಸದಸ್ಯರು ಮತ್ತು ಕುಟುಂಬವರ್ಗದವರು ಮುಂಚಿತವಾಗಿ ಆಸ್ಪತ್ರೆಯಲ್ಲಿ ತಮ್ಮ ಹೆಸರುಗಳನ್ನು ನೊಂದಾಯಿಸಿಕೊಳ್ಳಬೇಕು. ಮಾಹಿತಿಗಾಗಿ ಮೊ-94491 00007.

ಧಾರ್ಮಿಕ ಕಾರ್ಯಕ್ರಮ
ಶಿವಮೊಗ್ಗ:
ಮಿಳಘಟ್ಟದ ಶ್ರೀ ಗುರುಕರಿಬಸವೇಶ್ವರ ಮತ್ತು ಶ್ರೀ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಯುಗಾದಿ ಹಬ್ಬದ ಪ್ರಯುಕ್ತ 11ರಂದು ಬೆಳಿಗ್ಗೆ 6ಗಂಟೆಯಿಂದ ವಿಶೇಷ ಪೂಜೆಗಳನ್ನು ಹಮ್ಮಿಕೊಂಡಿದೆ. ಬೆಳಿಗ್ಗೆ 6ಕ್ಕೆ ಹರಕರೆಯಲ್ಲಿ ದೇವಿಗೆ ಗಂಗಾಪೂಜೆ ಸಲ್ಲಿಸಿ, ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆ ತರಲಾಗುವುದು. ನಂತರ 9.30ರಿಂದ 10.30ರವರೆಗೆ ಅಗ್ನಿಕುಂಡ (ಕೆಂಡಾರ್ಚನೆ) ನಡೆಯಲಿದೆ ಎಂದು ದೇವಸ್ಥಾನ ಸಮಿತಿ ತಿಳಿಸಿದೆ.

ಪಂಚಾಮೃತ ಅಭಿಷೇಕ
ಶಿವಮೊಗ್ಗ:
ಶ್ರೀ ವೆಂಕಟೇಶ್ವರ ದೇವಾಲಯದಲ್ಲಿ 11ರಂದು ಯುಗಾದಿ ಹಬ್ಬದ ಪ್ರಯುಕ್ತ ಸ್ವಾಮಿಗೆ ಪಂಚಾಮೃತ ಅಭಿಷೇಕ ಏರ್ಪಡಿಸಲಾಗಿದೆ. ಬೆಳಿಗ್ಗೆ 12ಕ್ಕೆ ಮಹಾಮಂಗಳಾರತಿ, ತೀರ್ಥಪ್ರಸಾದ ವಿನಿಯೋಗ, ಸಂಜೆ 6.30ಕ್ಕೆ ಮತ್ತೂರಿನ ಸನತ್ ಕುಮಾರ್ ಅವರಿಂದ ಹೊಸವರ್ಷದ ಪಂಚಾಂಗ ಶ್ರವಣ ಇರುತ್ತದೆ ಎಂದು ದೇವಾಲಯ ಸಮಿತಿ ತಿಳಿಸಿದೆ.

ಪ್ರವೀಣ್ ನೇಮಕ
ಶಿವಮೊಗ್ಗ:
ಜಿಲ್ಲಾ ಜೆಡಿಎಸ್ ಅಧ್ಯಕ್ಷ ಎಂ. ಶ್ರೀಕಾಂತ್ ಹಾಗೂ ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಡಿ. ಮಂಜುನಾಥ್ ಅನುಮೋದನೆ ಮೇರೆಗೆ ಎಸ್. ಪ್ರವೀಣ್‌ರನ್ನು ನಗರ ಯುವ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ ಎಂದು ನಗರ ಯುವ ಅಧ್ಯಕ್ಷ ಎನ್. ಏಳುಮಲೈ ತಿಳಿಸಿದ್ದಾರೆ.

13ರಂದು ಸಹ್ಯಾದ್ರಿ ಅವಲೋಕನ
ಶಿವಮೊಗ್ಗ:
ಪರಿಸರ ಅಧ್ಯಯನ ಕೇಂದ್ರ, ಕಿಡ್ಸ್ ಮತ್ತು ಜ್ಞಾನ ಸಾಗರ ನಾವೆ ಟ್ರಸ್ಟ್ ಆಶ್ರಯದಲ್ಲಿ ಏಪ್ರಿಲ್ 13ರಿಂದ 17ರವರೆಗೆ ಸಾಗರದ ಹೊಸಗದ್ದೆಯ ವೈದ್ಯ ಸುಬ್ಬಾಭಟ್ಟರ ಮನೆ ಆವರಣದಲ್ಲಿ ಸಹ್ಯಾದ್ರಿ ಅವಲೋಕನ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಾಹಿತಿ ನಾ. ಡಿಸೋಜ ಕಾರ್ಯಕ್ರಮಕ್ಕೆ ಚಾಲನೆ ನೀಡಿಲಿದ್ದು, ಮುಖ್ಯಅತಿಥಿಯಾಗಿ ಕುವೆಂಪು ವಿವಿಯ ಪ್ರಾಣಿ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಬಿ.ಬಿ. ಹೊಸಟ್ಟಿ, ಕಾರ್ಗಲ್ ವನ್ಯಜೀವಿ ವಿಭಾಗದ ಆರ್‌ಎಫ್‌ಓ ಪುಟ್ನಳ್ಳಿ, ವೀರೇಶ್, ಸ್ಥಳೀಯ ಮುಖಂಡ ಪದ್ಮರಾಜ್ ಕೌಶಿ ಪಾಲ್ಗೊಳ್ಳುವರು. ಅಧ್ಯಕ್ಷತೆಯನ್ನು ಕೇಂದ್ರದ ಅಧ್ಯಕ್ಷ ಚಂದ್ರಶೇಖರ್ ವಹಿಸುವರು.

ಆಂಧ್ರಕ್ಕೆ ಪ್ರವಾಸ
ಶಿವಮೊಗ್ಗ:
ನಗರದ ಶ್ರೀ ರಾಧಾ ಗೋವಿಂದಾ ಯಾತ್ರಾ ಟೂರ್ಸ್ ಅಂಡ್ ಟ್ರಾವೆಲ್‌ನಿಂದ ರಜೆ ಪ್ರಯುಕ್ತ ಏಪ್ರಿಲ್ ಮತ್ತು ಮೇ ಮಾಸದಲ್ಲಿ ಆಂಧ್ರಪ್ರದೇಶದ ಪ್ರಸಿದ್ಧ ಸ್ಥಳಗಳಿಗೆ ಯಾತ್ರೆ ಆಯೋಜಿಸಿದೆ. ವಾರದಲ್ಲಿ 2 ಬಾರಿ ಶಿವಮೊಗ್ಗದಿಂದ ತಿರುಪತಿ, ತಿರುಮಲ, ಕಾಳಹಸ್ತಿಗೆ ಯಾತ್ರೆ ಹೊರಡಲಿದ್ದು, ಆಸಕ್ತರು ಕೂಡಲೇ ತಮ್ಮ ಹೆಸರನ್ನು ನೋಂದಾಯಿಸುವಂತೆ ಆಯೋಜಕರು ತಿಳಿಸಿದ್ದಾರೆ. ವಿವರಗಳಿಗಾಗಿ- 08182-225999.

ಇಂದು ಶ್ರೀ ರಾಮ ಜಪಯಜ್ಞ
ಶಿವಮೊಗ್ಗ:
ವಿಶ್ವ ಹಿಂದೂ ಪರಿಷದ್ ಏಪ್ರಿಲ್ 11ರಂದು ಬೆಳಿಗ್ಗೆ 10.30ಕ್ಕೆ ಕೋಟೆ ಶ್ರೀ ಸೀತಾರಾಮಾಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಶ್ರೀ ರಾಮ ಜಪಯಜ್ಞ ಹಮ್ಮಿಕೊಂಡಿದೆ. ಫೆ.7ರಂದು ಪ್ರಯಾಗದ ಕುಂಭಮೇಳದಲ್ಲಿ ನಡೆದ ಸಾಧುಸಂತರ ಸಮ್ಮೇಳನವು ಶ್ರೀರಾಮ ಜನ್ಮಭೂಮಿ ಮಂದಿರದ ನಿರ್ಮಾಣ ಕುರಿತು ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ.

ಜೀಪ್- ಬೈಕ್ ಡಿಕ್ಕಿ: ಗಾಯ
ಕೊಪ್ಪ:
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದ ಬಿಂತ್ರವಳ್ಳಿ ಗ್ರಾ .ಪಂ. ವ್ಯಾಪ್ತಿಯ ಜೋಗಿಸರ ತಿರುವಿನ ಬಳಿಯಲ್ಲಿ ಜೀಪ್ ಮತ್ತು ಬೈಕ್ ನಡುವೆ ಮುಖಮುಖಿ ಡಿಕ್ಕಿ ಸಂಭವಿಸಿದ್ದರಿಂದ ಬೈಕ್ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಬುಧವಾರ ಸಂಭವಿಸಿದೆ. ಕೊರ್ಡಿಹಿತ್ಲುವಿನಿಂದ ಕೊಪ್ಪಕ್ಕೆ ಬರುತ್ತಿದ್ದ ಜೀಪ್ ಮತ್ತು ಕೊಪ್ಪದಿಂದ ಕೊರ್ಡಿಹಿತ್ಲುಗೆ ತೆರಳುತ್ತಿದ್ದ ಬೈಕ್ ಮುಖಮುಖಿ ಡಿಕ್ಕಿ ಸಂಭವಿದ್ದರಿಂದ ಬೈಕ್ ಚಾಲಕ ಬಸವರಾಜ್ ಪೆಟ್ಟುಬಿದ್ದರಿಂದ ಮಂಗಳೂರಿನ ವೆನಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement