ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಚೌಳಿಮಠ ಸ್ವಾಮೀಜಿ ನಿಗೂಢ ಸಾವು: ರಂಭಾಪುರಿ ಶ್ರೀ ಆತಂಕ

Vishwanath S
Updated On : 11 Apr 2013, 1:37 am

ಕ.ಪ್ರ. ವಾರ್ತೆ, ಸೊರಬ, ಏ.9
ಬೀದರ್ ಹೊರವಲಯದಲ್ಲಿರುವ ಚೌಳಿಮಠದ ಮೂವರು ಸ್ವಾಮೀಜಿಗಳ ನಿಗೂಢವಾದ ಸಾವು ಧಾರ್ಮಿಕ ಪ್ರಪಂಚಕ್ಕೆ ಅಘಾತ ತಂದಿದೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಜಗದ್ಗುರು ಪ್ರಸನ್ನ ರೇಣುಕ ವೀರಸೋಮೇಶ್ವರ ಶಿವಾಚಾರ್ಯರು ಆತಂಕ ವ್ಯಕ್ತಪಡಿಸಿದರು.
ಮಂಗಳವಾರ ತಾಲೂಕಿನ ಶಾಂತಾಪುರ ಮಠಕ್ಕೆ ಆಗಮಿಸಿದ್ದ ಅವರು ಮಾಧ್ಯಮವನ್ನುದ್ದೇಶಿಸಿ ಮಾತನಾಡಿದರು.
ಫೆಬ್ರವರಿ ತಿಂಗಳಿನಲ್ಲಿ ಸಂಭವಿಸಿದ ಹಿರಿಯ ಶ್ರೀ ಗಣೇಶ ಅವಧೂತರ ನಿಗೂಢ ಸಾವಿನ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸ್ ವರಿಷ್ಠಾಧಿಕಾರಿಗಳು, ಸರ್ಕಾರ ಹೆಚ್ಚಿನ ಗಮನ ಹರಿಸಿ ಕಾರ್ಯಪ್ರವೃತ್ತರಾಗಿದ್ದರೆ ಈ ದುರ್ಘಟನೆ ತಡೆಯಬಹುದಿತ್ತು ಎಂದರು. ಸಾವಿನ ಹಿಂದೆ ಕಾಣದ ಕೈಗಳ ಪಾತ್ರವಿದೆ ಎನ್ನಲು ಬೇಕಾದಷ್ಟು ಪುರಾವೆಗಳಿವೆ. ಕಾರಣಗಳೂ ಇವೆ. ಈಗಲಾದರೂ ಸರ್ಕಾರ ವಿಶೇಷ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement