ಮನಸ್ಸಿನ ಭಾವನೆ ಹೇಳಿದ್ದೇನೆ
ಶಿವಮೊಗ್ಗ: ನನ್ನ ಮನಸ್ಸಿನ ಭಾವನೆಯನ್ನು ಹೇಳಿದ್ದೇನೆ ಎಂದು ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರು ವಿಪ್ರ ವೇದಿಕೆ ಕಾರ್ಯಕ್ರಮದಲ್ಲಿ ಹೇಳಿದ ಮಾತುಗಳನ್ನು ಸಮರ್ಥಿಸಿಕೊಂಡಿದ್ದಾರೆ.
ಬುಧವಾರ ಸಂಜೆ ಹವ್ಯಕ ಸಮಾಜ ಆಯೋಜಿಸಿದ್ದ ಕಾರ್ಯಕ್ರಮದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಏನನ್ನು ಹೇಳಬೇಕೋ ಅದನ್ನೇ ಹೇಳಿದ್ದೇನೆ. ಏನನ್ನು ಹೇಳಬಾರದಿತ್ತೋ ಅದನ್ನು ಹೇಳಿಲ್ಲ. ದಾಖಲೆಗಳು ಮುಖ್ಯವಲ್ಲ, ಮನಸ್ಸಿನ ಭಾವನೆಗಳು ಮುಖ್ಯ ಎಂದು ಹೇಳಿದ್ದಾರೆ. ಲವ್ ಜಿಹಾದ್ ಕುರಿತಂತೆ ಈಶ್ವರಪ್ಪ ಅವರ ಹೇಳಿಕೆಯು ವಿವಾದಕ್ಕೆ ಕಾರಣವಾದ ಹಿನ್ನೆಲೆಯಲ್ಲಿ ಅವರ ಪ್ರತ್ರಿಕೆಯೆ ಕೇಳಿದಾಗ, ರಾಜಕಾರಣದಲ್ಲಿ ಪ್ರಮುಖರು ಎನಿಸಿಕೊಂಡಾಗ ವಿರೋಧ ಸಹಜ. ಆದರೂ ನಾನು ಗೆದ್ದು ಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಕನಕಗೋಪುರ ಕಟ್ಟುವ ವಿಚಾರದಲ್ಲಿ ಧರ್ಮ ಛಿದ್ರ ಮಾಡುತ್ತಿದ್ದವರಿಗೆ ನಿಮ್ಮ ಪ್ರಯತ್ನ ತಪ್ಪು ಎಂದಿದ್ದು ತಪ್ಪೇ ಎಂದು ಮರುಪ್ರಶ್ನಿಸಿದರು.