ಸಂಗೀತಗಾರರ ನಡುವಿನ ಅಂತರ ಕಡಿಮೆಯಾಗಿದೆ
ಸಾಗರ: ಸುಗಮ ಸಂಗೀತಗಾರರಿಂದ ಸಂಗೀತದ ವೈಶಿಷ್ಟ್ಯತೆಗೆ ಧಕ್ಕೆಯಾಗಿಲ್ಲ ಎಂದು ಸಂತ ಶಿಶುನಾಳ ಶರೀಫ ಪ್ರಶಸ್ತಿ ಪುರಸ್ಕೃತ ಗರ್ತಿಕೆರೆ ರಾಘಣ್ಣ ಅಭಿಪ್ರಾಯಪಟ್ಟರು.
ಇಲ್ಲಿನ ವೇದನಾದ ಪ್ರತಿಷ್ಠಾನ ಹಾಗೂ ಸದ್ಗುರು ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ವಿದ್ಯಾಲಯ ಹಮ್ಮಿಕೊಂಡಿದ್ದ ಜಿಲ್ಲಾ ಯುವ ಸಂಗೀತೋತ್ಸವ ಕಾರ್ಯಕ್ರಮದಲ್ಲಿ ವಿ. ಗಣೇಶ್ ಅವರ ಅಂತರಂಗದ ಹೂವು ಧ್ವನಿಸುರಳಿ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಧ್ವನಿಸುರಳಿಯ ಕರ್ತ ವಿ. ಗಣೇಶ್ ಮಾತನಾಡಿ, ಕವಿಗೆ ಕವನದ ಹಿರಿಮೆ ಗೊತ್ತಾಗುವುದು ಅವುಗಳು ರಾಗಸಂಯೋಜನೆಗೊಂಡು ಸಂಗೀತವಾಗಿ ಹೊರಹೊಮ್ಮಿದಾಗ ಎಂದು ಅಭಿಪ್ರಾಯಪಟ್ಟರು.
ಪ್ರತಿಷ್ಠಾನದ ಅಧ್ಯಕ್ಷ ವೆಂಕಟೇಶ್ ಹೆಗಡೆ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಪ್ರಾಚಾರ್ಯ ವಿಜಯವಾಮನ್, ಪಂಡಿತ್ ರಾಜರಾಂ ಸೊರಬ, ಪಂಡಿತ್ ಹುಮಾಯೂನ್ ಹರ್ಲಾಪುರ್, ಜಿ.ಆರ್. ಪಂಡಿತ್, ಐ.ವಿ. ಹೆಗಡೆ, ತಭಾಸ್ಕರ ಹೆಗಡೆ ಮುತ್ತಿಗೆ, ಶಾಂತಾರಾಂ ಭಟ್ ಇದ್ದರು.