ಹಳೆ ವಿದ್ಯಾರ್ಥಿಗಳ ಸಭೆ
ಕ.ಪ್ರ.ವಾರ್ತೆ ,ಶಿವಮೊಗ್ಗ ,ಏ.10
ನಗರದ ಹೊರವಲಯದಲ್ಲಿರುವ ಪಿಇಎಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಅಂಡ್ ಮ್ಯಾನೇಜ್‌ಮೆಂಟ್ ಕಾಲೇಜಿನಲ್ಲಿ ಬುಧವಾರ ಹಳೆ ವಿದ್ಯಾರ್ಥಿಗಳ ಸಭೆ ಏರ್ಪಡಿಸಲಾಗಿತ್ತು.
ಹಳೆ ವಿದ್ಯಾರ್ಥಿಗಳು ನಿರಂತರವಾಗಿ ಸಂಸ್ಥೆಯ ಸಂಪರ್ಕದಲ್ಲಿರಲು ಹಾಗೂ ಸಂಸ್ಥೆಯನ್ನು ಮತ್ತಷ್ಟು ಪ್ರಖ್ಯಾತಗೊಳಿಸುವುದು, ಪ್ರಸ್ತುತ ಇರುವ ಬಿಇ ಮತ್ತು ಎಂಬಿಎ ವಿದ್ಯಾರ್ಥಿಗಳಿಗೆ ಉತ್ತಮ ಶಿಕ್ಷಣ ನೀಡಲು ಹಳೆ ವಿದ್ಯಾರ್ಥಿಗಳಿಂದ ಸಲಹೆ ಮತ್ತು ಸಹಕಾರಗಳನ್ನು ಪಡೆಯುವ ನಿಟ್ಟಿನಲ್ಲಿ ಸಭೆ ಆಯೋಜಿಸಲಾಗಿತ್ತು.
ಸಭೆಯಲ್ಲಿ ಸಂಸ್ಥೆಯ ಟ್ರಸ್ಟಿ ಬಿ.ವೈ. ರಾಘವೇಂದ್ರ, ಜಂಟಿ ಕಾರ್ಯದರ್ಶಿ ಎಸ್.ವೈ. ಅರುಣಾದೇವಿ, ಸಲಹಾ ಸಮಿತಿ ಟ್ರಸ್ಟಿ ಎಸ್.ವೈ. ಉಮಾದೇವಿ, ಬಿ.ಎಸ್. ಉದಯಕುಮಾರ್, ಕಾಲೇಜು ಪ್ರಾಂಶುಪಾಲರು ಮತ್ತು ಭೋದಕ, ಭೋದಕೇತರ ವರ್ಗದವರು ಉಪಸ್ಥಿತರಿದ್ದರು.