15ರಂದು ದೇವರ ದಾಸಿಮಯ್ಯ ಜಯಂತಿ
ಶಿವಮೊಗ್ಗ: ನಗರ ದೇವಾಂಗ ಸಮಾಜ ಏಪ್ರಿಲ್ 15 ರಂದು ಸಂಜೆ 6ಕ್ಕೆ ದೇವಾಂಗ ಸಮುದಾಯ ಭವನದಲ್ಲಿ ದೇವರ ದಾಸಿಮಯ್ಯ ಜಯಂತಿ ಏರ್ಪಡಿಸಿದೆ.
ಸಮಾಜದ ಉಪಾಧ್ಯಕ್ಷ ಮಹಾಬಲೇಶ್ವರಪ್ಪ ಕಾರ್ಯಕ್ರಮ ಉದ್ಘಾಟಿಸಲಿದ್ದು, ತರೀಕೆರೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ಆರುಂಡಿ ನಾಗರಾಜ್, ಬನಶಂಕರಿ ಮಹಿಳಾ ಸಮಾಜದ ಅಧ್ಯಕ್ಷೆ ಪ್ರೇಮಾ ಗಿರಿಯಪ್ಪ ಹಾಗೂ ಸಂಘದ ಅಧ್ಯಕ್ಷರು, ಮಲೆನಾಡು ದೇವಾಂಗ ಸಮಾಜದ ಅಧ್ಯಕ್ಷ ಕೆ. ಬಸವರಾಜಪ್ಪ ಮೊದಲಾದವರು ಪಾಲ್ಗೊಳ್ಳುವರು ಎಂದು ಸಂಸ್ಥೆ ತಿಳಿಸಿದೆ. ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಯಶಸ್ವಿಗೊಳ್ಸಬೇಕು ಎಂದು ದೇವಾಂಗ ಸಮಾಜ ತಿಳಿಸಿದೆ.