ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಇಂದು ಶನೈಶ್ಚರಸ್ವಾಮಿ ಜಾತ್ರೋತ್ಸವ

Lingaraj Badiger
Updated On : 13 Apr 2013, 10:42 am

ಸಾಗರ: ತಾಲೂಕಿನ ಸೆಟ್ಟಿಸರದ ಶನೀಶ್ವರ ಕ್ಷೇತ್ರದಲ್ಲಿ ಶ್ರೀ ಶನೀಶ್ವರಸ್ವಾಮಿ ಜಾತ್ರೋತ್ಸವವು ಏ.13ಶನಿವಾರ ನಡೆಯಲಿದೆ. ಜಾತ್ರೆಯ ಅಂಗವಾಗಿ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ. ಏ. 14ರಂದು ಮಧ್ಯಾಹ್ನ ಅಭಿಜಿನ್ ಮುಹೂರ್ತದಲ್ಲಿ ಸಾಮೂಹಿಕ ವಿವಾಹ ಏರ್ಪಡಿಸಲಾಗಿದೆ. ಜಾತ್ರೆಯ ದಿನದಂದು ಶ್ರೀದೇವರ ಉತ್ಸವ ಮೂರ್ತಿಗೆ ಸ್ವಹಸ್ತದಿಂದ ರುದ್ರಪೂರ್ವಕ ಕುಂಭಾಭಿಷೇಕ ಇರುತ್ತದೆ. ಸಾಮೂಹಿಕ ವಿವಾಹದಲ್ಲಿ ಪಾಲ್ಗೊಳ್ಳಲು ಇಚ್ಚಿಸುವವರು ದೇವಸ್ಥಾನದಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು.

21ರಂದು ಸ್ವಯಂ ರಕ್ತದಾನ ಶಿಬಿರ
ಸಾಗರ: ಇಲ್ಲಿನ ರಾಷ್ಟ್ರೋತ್ಥಾನ ಬಳಗ, ಸೇವಾಸಾಗರ, ವಿಶ್ವ ಹಿಂದೂ ಪರಿಷತ್, ಸರ್ವಹಿತ ಟ್ರಸ್ಟ್, ಎಬಿವಿಪಿ, ಬೆಂಗಳೂರು ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರ ಹಾಗೂ ಶಿವಮೊಗ್ಗ ರೋಟರಿ ರಕ್ತನಿಧಿ ಕೇಂದ್ರ ಇವುಗಳ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷದ ಅಂಗವಾಗಿ ಏ.21ರಂದು ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ನಾರಾಯಣಮೂರ್ತಿ 9481255902, ಪ್ರವೀಣ್ 9449699182, ಆರಗ ಚಂದ್ರಶೇಖರ್ 9448639618.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement