ನಾಮಪತ್ರ ಸಲ್ಲಿಕೆಗೆ 17 ಕೊನೆ ದಿನ
ಕ.ಪ್ರ.ವಾರ್ತೆ, ಭದ್ರಾವತಿ, ಏ.12
ಚುನಾವಣೆಗೆ ಸ್ಪರ್ಧಿಸುವ ಉಮೇದುವಾರರು ತಮ್ಮ ನಾಮಪತ್ರಗಳನ್ನು ಖುದ್ದಾಗಿ ಅಥವಾ ಅವರ ಸೂಚಕರ ಮುಖೇನ ಚುನಾವಣಾಧಿಕಾರಿಗೆ ಅಥವಾ ಸಹಾಯಕ ಚುನಾವಣಾಧಿಕಾರಿಯಾದ ಭದ್ರಾವತಿ ತಹಸೀಲ್ದಾರರಿಗೆ ತಾಲೂಕು ಕಚೇರಿ ತಹಸೀಲ್ದಾರರ ಕೊಠಡಿಯಲ್ಲಿ ಯಾವುದೇ ದಿನದಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ದಿನಾಂಕ 17.04.2013ಕ್ಕೆ ಮೀರದಂತೆ (ಸರ್ಕಾರಿ ರಜಾದಿನ ಹೊರತುಪಡಿಸಿ) ಸಲ್ಲಿಸಬಹುದೆಂದು ಭದ್ರಾವತಿ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿಯವರು ತಿಳಿಸಿದ್ದಾರೆ.
ನಾಮಪತ್ರ ನಮೂನೆಗಳನ್ನು ತಹಸೀಲ್ದಾರರ ಕಚೇರಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ನಾಮಪತ್ರಗಳನ್ನು ತಾಲೂಕು ಕಚೇರಿ ಸಭಾಂಗಣದಲ್ಲಿ ಏ.18ರಂದು ಬೆಳಗ್ಗೆ 11 ಗಂಟೆಗೆ ಪರಿಶೀಲಿಸಲಾಗುವುದು ಎಂದು ಚುನಾವಣಾಧಿಕಾರಿಗಳ ಪ್ರಕಟಣೆಯಲ್ಲಿ ತಿಳಿಸಲಾಗಿದೆ.