ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಬಿಜೆಪಿಯಿಂದ ಮಹಿಳೆಯರಿಗೆ ಆದ್ಯತೆ: ಶರಾವತಿ ರಾವ್

Lingaraj Badiger
Updated On : 13 Apr 2013, 10:34 am

ಕ.ಪ್ರ.ವಾರ್ತೆ, ಸಾಗರ, ಏ.12: ಬಿಜೆಪಿ ಸಾಗರ ಕ್ಷೇತ್ರದಿಂದ ತಮಗೆ ಟಿಕೆಟ್ ನೀಡುವ ಮೂಲಕ ಮಹಿಳೆಯರಿಗೆ ಆದ್ಯತೆ ನೀಡಿರುವುದನ್ನು ಕೃತಿಯಲ್ಲಿ ಮಾಡಿ ತೋರಿಸಿದೆ ಎಂದು ಬಿಜೆಪಿ ಅಭ್ಯರ್ಥಿ ಶರಾವತಿ ಸಿ. ರಾವ್‌ಹೇಳಿದರು.
 ಶುಕ್ರವಾರ ಸುದ್ದಿಗೋಷ್ಠಿಯಲ್ಲಿ, ಎಲ್ಲ ರಾಜಕೀಯ ಪಕ್ಷಗಳು ಬಾಯಿ ಮಾತಿನಲ್ಲಿ ಮಹಿಳೆಯರಿಗೆ ಆದ್ಯತೆ ನೀಡುವುದಾಗಿ ಹೇಳುತ್ತದೆ. ಆದರೆ ಬಿಜೆಪಿ ಈ ಬಾರಿ ಸಾಗರ ಕ್ಷೇತ್ರದಿಂದ ಮಹಿಳಾ ಅಭ್ಯರ್ಥಿಗೆ ಟಿಕೆಟ್ ನೀಡಿರುವುದು ಸಂತಸ ತಂದಿದೆ ಎಂದರು.
 ಈ ಬಾರಿ ಬಿಜೆಪಿ ಕಳೆದ 5 ವರ್ಷದ ಅಧಿಕಾರಾವಧಿಯ ಅಭಿವೃದ್ಧಿ ಕಾರ್ಯ ಮುಂದಿಟ್ಟುಕೊಂಡು ಚುನಾವಣೆ ಎದುರಿಸುತ್ತಿದೆ. ತನ್ನ ಅಧಿಕಾರಾವಧಿಯಲ್ಲಿ ಬಿಜೆಪಿ ಹಲವು ಜನಪರ ಯೋಜನೆ ಕೊಟ್ಟಿದ್ದು, ಅದು ಸಮಾಜದ ಎಲ್ಲ ವರ್ಗದವರನ್ನು ತಲುಪಿದೆ ಎಂದರು.
ಬಿಜೆಪಿ ಖಚಿತ: ಈ ಬಾರಿ ಬಿಜೆಪಿ ನರೇಂದ್ರ ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯೆಂದು ಘೋಷಿಸಿರುವುದರಿಂದ ಅದು ವಿಧಾನಸಭೆ ಚುನಾವಣೆ ಮೇಲೂ ಪರಿಣಾಮ ಉಂಟುಮಾಡಲಿದೆ. ಮುಂದೆ ಕೇಂದ್ರದಲ್ಲಿಯೂ ಬಿಜೆಪಿಯೇ ಅಧಿಕಾರಕ್ಕೆ ಬರುವುದು ನಿಶ್ಚಿತವಾಗಿದ್ದು, ರಾಜ್ಯದ ಜನರೂ ಇನ್ನೊಮ್ಮೆ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ಖಚಿತ ಎಂದು ಹೇಳಿದರು.
 ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮಾತನಾಡಿ, ಜಿಲ್ಲೆಯಲ್ಲಿ ಪಕ್ಷ ಸಾಮಾಜಿಕ ನ್ಯಾಯದ ನೆಲೆಯಲ್ಲಿ ಟಿಕೆಟ್ ನೀಡಿದೆ. ಸಂಘಟನಾತ್ಮಕವಾಗಿ, ಪಕ್ಷದ ತತ್ವ ಸಿದ್ಧಾಂತ, ಅಭಿವೃದ್ಧಿ ಆಧಾರದಲ್ಲಿ ಚುನಾವಣೆ ಎದುರಿಸಲಿದ್ದು, ಪರಿವಾರದ ಸಂಘಟನೆಗಳು ಪಕ್ಷವನ್ನು ಸಂಪೂರ್ಣ ಬೆಂಬಲಿಸಲಿವೆ ಎಂದರು.
 ಪಕ್ಷದ ಪ್ರಮುಖರಾದ ಎಸ್.ವಿ. ಕೃಷ್ಣಮೂರ್ತಿ, ಸುಮನಾ ಗೋಮ್ಸ್, ಸತೀಶಬಾಬು, ಬೆಳ್ಳೂರು ತಿಮ್ಮಪ್ಪ, ತ್ಯಾಗಮೂರ್ತಿ, ಚೇತನರಾಜ್, ವ.ಶಂ. ರಾಮಚಂದ್ರ ಭಟ್ ಮೊದಲಾದವರು ಹಾಜರಿದ್ದರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement