ಮೆಗ್ಗಾನ್ ಆಸ್ಪತ್ರೆಯಲ್ಲಿ ಅನಾಮಧೇಯ ಶವ ಪತ್ತೆ
ಶಿವಮೊಗ್ಗ: ಏ. 11ರಂದು ಬೆಳಿಗ್ಗೆ 9.30ಕ್ಕೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಯಲ್ಲಿ ಅನಾಮಧೇಯ ಗಂಡಸಿನ ಶವವು ಪತ್ತೆಯಾಗಿದ್ದು, ಸುಮಾರು 55 ವರ್ಷ ವಯಸ್ಸಿನ, 5.6 ಅಡಿ ಎತ್ತರದ, ಕೋಲು ಮುಖ, ಸಾಧಾರಣ ಮೈಕಟ್ಟು, ಗೋಧಿಬಣ್ಣ ಹೊಂದಿರುವ, ತುಂಬು ತೋಳಿನ ಕ್ರೀಮ್ ಬಣ್ಣದ ಶರ್ಟ್‌ನ್ನು ಧರಿಸಿದ್ದಾರೆ.
ಈ ಅನಾಮಧೇಯ ಶವದ ವಾರಸುದಾರರು ಮಾಹಿತಿಗಾಗಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್, ತುಂಗಾ ಪೊಲೀಸ್ ಠಾಣೆ, ಶಿವಮೊಗ್ಗ ಇಲ್ಲಿಗೆ ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪೋಷಕರ ಪತ್ತೆಗಾಗಿ
ಶಿವಮೊಗ್ಗ: ಶಿವಮೊಗ್ಗ ಸರ್ಕಾರಿ ಬಾಲಕರ ಬಾಲಮಂದಿರ ಸಂಸ್ಥೆಯ ಸ್ವಾಗತ ಕೇಂದ್ರಕ್ಕೆ ಸುಮಾರು 17ರಿಂದ 18ವರ್ಷ ವಯಸ್ಸಿನ, 5.10ಅಡಿ ಎತ್ತರ, ಕೈ ಮತ್ತು ಕಾಲುಗಳ ಮೇಲೆ ಸುಟ್ಟ ಗಾಯದ ಕಲೆ ಹೊಂದಿರುವ, ಗೋಪಿ ಎಂಬ ಹೆಸರಿನ ಬಾಲಕ ದಾಖಲಾಗಿರುತ್ತಾನೆ. ಈ ಬಾಲಕನ ಪಾಲಕರು, ಪೋಷಕರು ಸರ್ಕಾರಿ ಬಾಲಕರ ಬಾಲಮಂದಿರ, ಆಲ್ಕೊಳ, ಶಿವಮೊಗ್ಗ ಕಚೇರಿಯನ್ನು ಸಂಪರ್ಕಿಸುವಂತೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿವರಗಳಿಗಾಗಿ- 08182-251511.
ಕಾಣೆಯಾಗಿದ್ದಾರೆ
ಶಿವಮೊಗ್ಗ: ಭದ್ರಾವತಿ ತಾಲೂಕಿನ ಕಲ್ಲಹಳ್ಳಿ ಕಸಬಾ (ಹೋ) ಸಿರಿಯೂರು ಅಂಚೆ ಇಲ್ಲಿನ ವಾಸಿಗಳಾದ ಗಿರಿಜಾಬಾಯಿ ಕೋಂ ಸೂರ್ಯನಾಯ್ಕ ಅವರ ಮಗಳು ಶೃತಿ (19) ಕಾಣಿಯಾಗಿದ್ದಾರೆ.
ಕಳೆದ 3 ವರ್ಷಗಳಿಂದ ಅನುಪಿನಕಟ್ಟಯಲ್ಲಿ ಕೂಲಿಕೆಲಸ ಮಾಡಿಕೊಂಡಿದ್ದು, ಏ. 7ರಂದು ಬೆಳಿಗ್ಗೆ 10ಗಂಟೆಗೆ ಆಸ್ಪತ್ರೆಗೆ ಹೋಗುವುದಾಗಿ ತಿಳಿಸಿ ಮನೆ ಬಿಟ್ಟವರು ಇಲ್ಲಿಯವರೆಗೂ ಹಿಂದಿರುಗಿರುವುದಿಲ್ಲ.
ಇವರು 5 ಅಡಿ, 4 ಇಂಚು ಎತ್ತರ, ಸಾಧಾರಣ ಮೈಕಟ್ಟು, ಎಣ್ಣೆಗೆಂಪು ಮೈಬಣ್ಣ, ಹೊಂದಿರುವ ಇವರು ಕನ್ನಡ, ಲಂಬಾಣಿ ಭಾಷೆಯನ್ನು ಮಾತನಾಡಬಲ್ಲವರಾಗಿದ್ದಾರೆ.
ಬಿಳಿ ಬಣ್ಣದ ಚೂಡಿದಾರ್, ಬಿಳಿ ಬಣ್ಣದ ವೇಲ್‌ನ್ನು ಧರಿಸಿದ್ದರು. ಮಾಹಿತಿ ದೊರೆತರೆ ನಗರದ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು. ವಿವರಗಳಿಗಾಗಿ- .08182-261423.