ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಶಿವಮೊಗ್ಗ

ಮೇ 26ಕ್ಕೆ ಸಾಮೂಹಿಕ ವಿವಾಹ

Lingaraj Badiger
Updated On : 13 Apr 2013, 10:43 am

ಕ.ಪ್ರ.ವಾರ್ತೆ, ಭದ್ರಾವತಿ, ಏ.12
ಭದ್ರಾವತಿಯಲ್ಲಿ ಕಳೆದ 30 ವರ್ಷಗಳಲ್ಲಿ 720 ಸಾಮೂಹಿಕ ವಿವಾಹ ಮಾಡಿರುವ ವಿಶ್ವಹಿಂದು ಪರಿಷತ್ ಮತ್ತು ವಿಶ್ವಭಾರತಿ ವಿಶ್ವಸ್ಥ ಮಂಡಳಿ ಈಗ 31ನೇ ಬಾರಿಗೆ ಮೇ 26ರ ಭಾನುವಾರ ಪಟ್ಟಣದ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 12 ಗಂಟೆಯಿಂದ ಸಾಮೂಹಿಕ ವಿವಾಹ ಏರ್ಪಡಿಸಿದೆ.
ತರೀಕೆರೆಯ ನಂದೀಮಠದ ವೃಷಭೇಂದ್ರ ದೇಶೀಕೇಂದ್ರ ಶ್ರೀಗಳ ಸಾನ್ನಿಧ್ಯದಲ್ಲಿ ಉಚಿತ ಸಾಮೂಹಿಕ ವಿವಾಹ ಹಮ್ಮಿಕೊಳ್ಳಲಾಗಿದ್ದು, ಆಸಕ್ತರು ಇದರ ಉಪಯೋಗ ಪಡೆದುಕೊಳ್ಳಬೇಕೆಂದು ಆಯೋಜಕರು ಕೋರಿದ್ದಾರೆ.
ದೃಢೀಕರಣ ಪತ್ರ ಕಡ್ಡಾಯ: ವರನಿಗೆ 21, ವಧುವಿಗೆ 18 ವರ್ಷ ವಯಸ್ಸಾಗಿರಬೇಕು ಮತ್ತು ವಯಸ್ಸಿನ ದೃಢೀಕರಣ ಪತ್ರ ಹಾಗೂ ಇತ್ತೀಚಿನ ಭಾವಚಿತ್ರವನ್ನು ಕಡ್ಡಾಯವಾಗಿ ಲಗತ್ತಿಸಿರಬೇಕು.
ವಿವಾಹ ಅಪೇಕ್ಷಿತರು ಮೇ15ರೊಳಗೆ ಕೋರಿಕೆ ಪತ್ರ ಪಡೆದು ಭರ್ತಿಮಾಡಿ ತಲಪಿಸಬೇಕು.  ವಿಧವಾ ವಿವಾಹಕ್ಕೆ ಅವಕಾಶವಿರುವುದು. ಒಂದು ಮದುವೆಯ ಖರ್ಚನ್ನು ವಹಿಸುವ ದಾನಿಗಳ ದಂಪತಿಗಳಿಗೆ ಹಾಗೂ ಹೆಚ್ಚಿನ ಧನಸಹಾಯ ಮಾಡಿದ ದಾನಿಗಳನ್ನು ಸನ್ಮಾನಿಸಲಾಗುವುದು. ವಿವಾಹವಾದ ನಂತರ ವಿವಾಹ ದೃಢೀಕರಣ ಪತ್ರ ನೀಡಲಾಗುವುದು. ವಿವರಗಳಿಗೆ ಹಾ. ರಾಮಪ್ಪ ಮೊ. 9880779293) ಅಥವಾ ಡಿ.ಆರ್.ಶಿವಕುಮಾರ್ ಮೊ. 9964237078 ಇವರುಗಳನ್ನು ಸಂಪರ್ಕಿಸಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement