ರಸ್ತೆ ಅಪಘಾತ: ಮಗು ಸೇರಿ ಇಬ್ಬರು ಸಾವು
ಕ.ಪ್ರ. ವಾರ್ತೆ, ಶಿವಮೊಗ್ಗ, ಏ.12
ಮಲೆಶಂಕರ ಬಳಿ ನಡೆದ ರಸ್ತೆ ಅಪಘಾತದಲ್ಲಿ 3 ವರ್ಷದ ಬಾಲಕಿ ಸೇರಿದಂತೆ ಇಬ್ಬರು ಮೃತಪಟ್ಟ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ಸೈಯದ್ ಮಸ್ತಾಫ್ (56), ಹಬೀಬಾ (3) ಮೃತಪಟ್ಟವರು. ತುಮಕೂರಿನಿಂದ ಟಾಟಸುಮೋದಲ್ಲಿ ಹಣಗೆರೆಕಟ್ಟೆಗೆ ಧಾರ್ಮಿಕ ಕಾರ್ಯನಿಮಿತ್ತ ಆಗಮಿಸಿದ್ದ ಒಂದೇ ಕುಟುಂಬದ 13 ಜನ ಗುರುವಾರ ಇಲ್ಲಿಯೇ ತಂಗಿದ್ದರು. ನಂತರ ಶುಕ್ರವಾರ ಬೆಳಿಗ್ಗೆ ಧಾರ್ಮಿಕ ಕಾರ್ಯ ಮುಗಿಸಿ ಹೊರಟಿದ್ದು, ವೇಗವಾಗಿ ಬಂದ ಚಾಲಕ ಇಲ್ಲಿನ ಮಲೆಶಂಕರ ಬಳಿ ಮರಕ್ಕೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಸ್ಥಳದಲ್ಲೇ ಸೈಯದ್ ಮಸ್ತಾಫ್‌ಮೃತಪಟ್ಟಿದ್ದು, ಬಾಲಕಿ ಹಬೀಬಾಳನ್ನು ಆಸ್ಪತ್ರೆ ಕರೆ ತರವುವಾಗ ಮಾರ್ಗ ಮಧ್ಯದಲ್ಲೇ ಸಾವನಪ್ಪಿದ್ದಾಳೆ. ಉಳಿದ 10 ಜನರು ಗಾಯಗೊಂಡು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣ ಠಾಣೆಯಲ್ಲಿ ದಾಖಲಾಗಿದೆ.
ಜೂಜಾಟ: ಬಂಧನ
ಭದ್ರಾವತಿ: ಪಟ್ಟಣದ ವೇಲೂರ್ ಶೆಡ್ ಪ್ರದೇಶದಲ್ಲಿ ಇಸ್ಪೀಟ್ ಜೂಜಾಟದಲ್ಲಿ ತೊಡಗಿದ್ದವರ ಮೇಲೆ ದಾಳಿ ನಡೆಸಿದ ನ್ಯೂಟೌನ್ ಠಾಣೆ ಎಸ್‌ಐ ಚಂದ್ರಶೇಖರ್ ಜೂಜುಕೋರರನ್ನು ಬಂಧಿಸಿ ರು. 9400 ಹಾಗೂ ಇಸ್ಪೀಟ್ ಎಲೆಗಳನ್ನು ವಶಪಡಿಸಿಕೊಂಡಿದ್ದಾರೆ.
ನೂತನ ಎಸ್‌ಐ ನೇಮಕ
ನ್ಯೂಟೌನ್ ಠಾಣೆಯ ಅಪರಾಧ ವಿಭಾಗದ ಸಬ್ ಇನ್ಸ್‌ಪೆಕ್ಟರ್ ಆಗಿ ಲತಾ ವಿ. ಕಾಳೇಗರ್ ಅವರು ನೇಮಕಗೊಂಡಿದ್ದಾರೆ. ಪಟ್ಟಣದ ಪ್ರಥಮ ಮಹಿಳಾ ಎಸ್‌ಐ ಎನಿಸಿಕೊಂಡಿರುವ ಇವರು ಮೂಲತಃ ಕಾರವಾರದವರಾಗಿದ್ದು, ಭದ್ರಾವತಿಗೆ ಬರುವ ಮುನ್ನ ದಾವಣಗೆರೆಯ ಡಿಸಿಐಬಿ ಶಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಅಪರಾಧ ವಿಭಾಗದ ಎಸ್‌ಐ ಆಗಿದ್ದ ವೈ. ತಿಮ್ಮಪ್ಪ ಅವರನ್ನು ವರ್ಗಾವಣೆ ಮಾಡಲಾಗಿದೆ.